ಭಾರತ-ಅಮೆರಿಕ ನಡುವೆ ಪರಿಶುದ್ಧ ಇಂಧನ ಸಹಕಾರಕ್ಕಾಗಿ ಮಸೂದೆ ಮಂಡಿಸಿದ ಅಮೆರಿಕ ಸೆನೆಟರ್

Update: 2020-10-01 16:46 GMT

ವಾಶಿಂಗ್ಟನ್, ಅ. 1: ಪರಿಶುದ್ಧ ಇಂಧನ ತಂತ್ರಜ್ಞಾನಗಳು ಮತ್ತು ಇಂಧನ ಸಾಗಾಣಿಕೆ ವಿಷಯದಲ್ಲಿ ಭಾರತದೊಂದಿಗೆ ಸಹಕಾರವನ್ನು ಏರ್ಪಡಿಸುವುದಕ್ಕೆ ಸಂಬಂಧಿಸಿದ ಮಸೂದೆಯೊಂದನ್ನು ಡೆಮಾಕ್ರಟಿಕ್ ಪಕ್ಷದ ಸೆನೆಟರ್ ರಾಬರ್ಟ್ ಮೆನೆಂಡೇಝ್ ಅಮೆರಿಕ ಸೆನೆಟ್‌ನಲ್ಲಿ ಬುಧವಾರ ಮಂಡಿಸಿದ್ದಾರೆ.

 ಸೆನೆಟ್ ವಿದೇಶ ಸಂಬಂಧಗಳ ಸಮಿತಿಯ ಸದಸ್ಯರೂ ಆಗಿರುವ ಮೆನೆಂಡೇಝ್ ಮಂಡಿಸಿರುವ ‘ಪ್ರಯೋರಿಟೈಸಿಂಗ್ ಕ್ಲೀನ್ ಎನರ್ಜಿ ಆ್ಯಂಡ್ ಕ್ಲೈಮೇಟ್ ಕೋಪರೇಶನ್ ವಿದ್ ಇಂಡಿಯಾ ಆ್ಯಕ್ಟ್’ ಮಸೂದೆಯು, ಎರಡು ದೇಶಗಳ ನಡುವೆ ಪರಿಶುದ್ಧ ಇಂಧನ ಮತ್ತು ವಿದ್ಯುತ್ ಸಾಗಾಣಿಕೆ ಭಾಗೀದಾರಿಕೆ (ಯುಎಸ್-ಇಂಡಿಯಾ ಕ್ಲೀನ್ ಎನರ್ಜಿ ಪವರ್ ಟ್ರಾನ್ಸ್‌ಮಿಶನ್ ಪಾರ್ಟ್‌ನರ್‌ಶಿಪ್- ಸಿಇಪಿಟಿಪಿ)ಯೊಂದನ್ನು ಏರ್ಪಡಿಸುವಂತೆ ಕರೆ ನೀಡುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News