ನಿಯಾಂಡರ್‌ತಾಲ್ ವಂಶವಾಹಿಯವರಲ್ಲಿ ಕೊರೋನ ತೀವ್ರತೆ ಹೆಚ್ಚು: ಅಧ್ಯಯನ

Update: 2020-10-01 17:05 GMT

ಪ್ಯಾರಿಸ್, ಅ. 1: ನಿಯಾಂಡರ್‌ತಾಲ್ ಡಿಎನ್‌ಎಯ ಅಂಶ ಹೊಂದಿರುವ ಕೊರೋನ ವೈರಸ್ ರೋಗಿಗಳು ತೀವ್ರ ಸಮಸ್ಯೆಗಳಿಗೆ ಗುರಿಯಾಗುವ ಸಾಧ್ಯತೆಗಳು ಹೆಚ್ಚಾಗಿವೆ ಎಂದು ಸಂಶೋಧಕರು ಕಂಡುಕೊಂಡಿದ್ದಾರೆ.

ನಿಯಾಂಡರ್‌ತಾಲ್ ಮಾನವರು ಮಾನವರ ಆರಂಭಿಕ ಅವಧಿಯ ಸಹೋದರ ಸಂಬಂಧಿಗಳಾಗಿದ್ದಾರೆ. ಈ ತಳಿಯ ಮಾನವರು ಸುಮಾರು 8 ಲಕ್ಷ ವರ್ಷಗಳ ಹಿಂದಿನಿಂದ ಭೂಮಿಯಲ್ಲಿ ಬದುಕಿದ್ದರು. ಸುಮಾರು 40,000 ವರ್ಷಗಳ ಹಿಂದೆ ಅವರ ವಂಶ ಅಳಿಯಿತು. ಇದೇ ಅವಧಿಯಲ್ಲಿ ಆಧುನಿಕ ಮಾನವರ ಉಗಮವಾಯಿತು.

ಸುಮಾರು 60,000 ವರ್ಷಗಳ ಹಿಂದೆ ಆಧುನಿಕ ಮಾನವರ ವಂಶವಾಹಿಗೆ ನಿಯಾಂಡರ್‌ತಾಲ್ ವಂಶವಾಹಿ ಸೇರ್ಪಡೆಗೊಂಡಿತು ಎಂದು ‘ನೇಚರ್’ ಪತ್ರಿಕೆಯಲ್ಲಿ ಪ್ರಕಟಗೊಂಡ ಅಧ್ಯಯನವೊಂದು ತಿಳಿಸಿದೆ.

ಕೆಲವು ಕೊರೋನ ವೈರಸ್ ರೋಗಿಗಳು ಆಸ್ಪತ್ರೆಗಳ ತೀವ್ರ ನಿಗಾ ವಿಭಾಗಕ್ಕೆ ಯಾಕೆ ದಾಖಲಾಗಬೇಕಾಗುತ್ತದೆ ಹಾಗೂ ಇತರರಲ್ಲಿ ಯಾಕೆ ಸೌಮ್ಯ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ ಅಥವಾ ಯಾವುದೇ ಲಕ್ಷಣಗಳು ಕಾಣಿಸಿಕೊಳ್ಳುವುದಿಲ್ಲ ಎನ್ನುವುದಕ್ಕೆ ಹಲವು ಕಾರಣಗಳಿವೆ.

ಇವುಗಳ ಪೈಕಿ ನಿಯಾಂಡರ್‌ತಾಲ್ ವಂಶವಾಹಿಯ ಅಂಶವೂ ಒಂದು ಎಂದು ಅಧ್ಯಯನದ ಸಹ ಲೇಖಕ ಸ್ವಾಂಟ್ ಪಾಬೊ ಹೇಳುತ್ತಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News