×
Ad

ಅಸ್ಸಾಮಿನ ಮೂಲನಿವಾಸಿ ಗುಂಪುಗಳಿಂದ ನೂತನ ರಾಜಕೀಯ ಪಕ್ಷದ ಸ್ಥಾಪನೆ

Update: 2020-10-02 22:42 IST
ಫೈಲ್ ಚಿತ್ರ

ಗುವಾಹಟಿ,ಅ.2: ಮುಂದಿನ ವರ್ಷದ ಅಸ್ಸಾಂ ವಿಧಾನಸಭಾ ಚುನಾವಣೆಯಲ್ಲಿ ಹೋರಾಡಲು ಕೃಷಕ ಮುಕ್ತಿ ಸಂಗ್ರಾಮ ಸಮಿತಿ (ಕೆಎಂಎಸ್‌ಎಸ್),70 ಮೂಲನಿವಾಸಿ ಗುಂಪುಗಳು ಹಾಗೂ ಒಂದು ಪ್ರಾದೇಶಿಕ ಪಕ್ಷ ಪರಸ್ಪರ ಕೈಜೋಡಿಸಿದ್ದು,ಇದಕ್ಕಾಗಿ ನೂತನ ರಾಜಕೀಯ ಪಕ್ಷವನ್ನು ಸ್ಥಾಪಿಸಿವೆ. ಮಹಾತ್ಮಾ ಗಾಂಧಿ ಜಯಂತಿ ಮತ್ತು ಬಂಧನದಲ್ಲಿರುವ ಕೆಎಂಎಸ್‌ಎಸ್ ನಾಯಕ ಅಖಿಲ್ ಗೊಗೊಯಿ ಅವರ ಜನ್ಮದಿನವಾದ ಶುಕ್ರವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ನೂತನ ಪಕ್ಷ ‘ರೈಜೋರ್ ದಳ (ಜನತೆಯ ಪಕ್ಷ)’ಕ್ಕೆ ಚಾಲನೆ ನೀಡಲಾಯಿತು.

70 ಮೂಲನಿವಾಸಿ ಗುಂಪುಗಳು ಮತ್ತು ಪ್ರಾದೇಶಿಕ ಪಕ್ಷ ‘ಸಂಯುಕ್ತ ಅಂಚಲಿಕ್ ದಳ,ಅಸ್ಸಾಂ’ ಸಿಎಎ ವಿರೋಧಿ ಪ್ರತಿಭಟನೆ ಸಂದರ್ಭ ಒಂದಾಗಿದ್ದವು.

 ಗೊಗೊಯಿ ಮತ್ತು ಕೆಎಂಎಸ್‌ಎಸ್‌ನ ನಿರ್ಗಮಿತ ಅಧ್ಯಕ್ಷ ಬಿ.ಡಿ.ಸೈಕಿಯಾ ಅವರು ನೂತನ ಪಕ್ಷದ ಸಂಚಾಲಕರಾಗಿ ನೇಮಕಗೊಂಡಿದ್ದಾರೆ. ನೂತನ ಪಕ್ಷವು ‘ಜಾಗತಿಕವಾಗಿ ಚಿಂತನೆ,ಸ್ಥಳೀಯವಾಗಿ ಕಾರ್ಯ ’ಎಂಬ ಧ್ಯೇಯವಾಕ್ಯದೊಂದಿಗೆ ಪ್ರತಿಯೊಬ್ಬರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಅಭಿವೃದ್ಧಿಯ ಹೊಸ ಯುಗದೊಂದಿಗೆ ನೂತನ ಅಸ್ಸಾಮಿಗಾಗಿ ಶ್ರಮಿಸಲಿದೆ ಎಂದು ಸೈಕಿಯಾ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News