ಅರುಣಾಚಲ ಪ್ರದೇಶ: ಮೂರು ಜಿಲ್ಲೆಗಳು,ನಾಲ್ಕು ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಅಫ್‌ಸ್ಪಾ ಆರು ತಿಂಗಳು ವಿಸ್ತರಣೆ

Update: 2020-10-02 18:01 GMT

ಹೊಸದಿಲ್ಲಿ,ಅ.2: ಕೇಂದ್ರವು ಅರುಣಾಚಲ ಪ್ರದೇಶದ ಮೂರು ಜಿಲ್ಲೆಗಳು ಮತ್ತು ಇತರ ಮೂರು ಜಿಲ್ಲೆಗಳ ನಾಲ್ಕು ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿಯ ಬಂಡುಕೋರ ಚಟುವಟಿಕೆಗಳು ಹಾಗೂ ಕಾನೂನು ಮತ್ತು ಸುವ್ಯವಸ್ಥೆ ಸ್ಥಿತಿಯನ್ನು ಮರುಪರಿಶೀಲಿಸಿದ ಬಳಿಕ ಅಲ್ಲಿ ಸಶಸ್ತ್ರ ಪಡೆಗಳ ವಿಶೇಷಾಧಿಕಾರ ಕಾಯ್ದೆ (ಅಫ್‌ಸ್ಪಾ)ಯನ್ನು ಇನ್ನೂ ಆರು ತಿಂಗಳು ಕಾಲ ವಿಸ್ತರಿಸಿದೆ. ಈ ಆದೇಶವು ಅ.1ರಿಂದಲೇ ಜಾರಿಗೊಂಡಿದೆ.

ತಿರಾಪ್,ಚಾಂಗ್ಲಾಂಗ್ ಮತ್ತು ಲಾಂಗ್ಡಿಂಗ್ ಜಿಲ್ಲೆಗಳನ್ನು ಅ.1ರಿಂದ 2021,ಮಾ.31ರವರೆಗೆ ಅಫ್‌ಸ್ಪಾ ಕಾಯ್ದೆಯಡಿ ಆತಂಕಿತ ಪ್ರದೇಶಗಳೆಂದು ಘೋಷಿಸಲಾಗಿದೆ. ಇದೇ ರೀತಿ ನಮ್ಸಾಯಿ,ಲೋವರ್ ದಿಬಾಂಗ್ ವ್ಯಾಲಿ ಮತ್ತು ಲೋಹಿತ ಜಿಲ್ಲೆಗಳಲ್ಲಿಯ ನಾಲ್ಕು ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿಯೂ ಅಫ್‌ಸ್ಪಾವನ್ನು ಈ ಅವಧಿಗೆ ವಿಸ್ತರಿಸಲಾಗಿದೆ ಎಂದು ಕೇಂದ್ರ ಗೃಹ ಸಚಿವಾಲಯವು ಅಧಿಸೂಚನೆಯಲ್ಲಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News