ಕಾಸರಗೋಡು ; ಕೊರೋನ ಸೋಂಕು ಭೀತಿ : ಅ.9ರವರೆಗೆ ನಿಷೇಧಾಜ್ಞೆ

Update: 2020-10-03 08:27 GMT

ಕಾಸರಗೋಡು : ಜಿಲ್ಲೆಯಲ್ಲಿ ಕೊರೋನ  ಸೋಂಕು ದಿನಂಪ್ರತಿ ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಇಂದಿನಿಂದ ಅಕ್ಟೋಬರ್ 9 ರ ತನಕ  1973 ರ ಕ್ರಿಮಿನಲ್ ಕಾಯ್ದೆಯಂತೆ  144  ನಿಷೇಧಾಜ್ಞೆಯನ್ನು ಜಾರಿಗೊಳಿಸಿ  ಜಿಲ್ಲಾಧಿಕಾರಿ  ಡಾ . ಡಿ . ಸಜಿತ್ ಬಾಬು ಆದೇಶ ನೀಡಿದ್ದಾರೆ.

ನಿಷೇಧಾಜ್ಞೆ  ಅ. 2ರ ರಾತ್ರಿ 12 ಗಂಟೆಯಿಂದ ಅ. 9 ರ ರಾತ್ರಿ 12 ಗಂಟೆ ತನಕ ಜಾರಿಯಲ್ಲಿರಲಿದೆ. ಕೇರಳದ  ರಾಜ್ಯದಾದ್ಯಂತ   ಅಕ್ಟೋಬರ್ 31 ರ ತನಕ ನಿಷೇಧಾಜ್ಞೆ ಜಾರಿಗೆ ತರಲಾಗಿತ್ತು . ಆದರೆ ಕಾಸರಗೋಡು ಜಿಲ್ಲೆಯಲ್ಲಿ ಒಂದು ವಾರಕ್ಕೆ ಸೀಮಿತ ಗೊಳಿಸಲಾಗಿದೆ. ಸೋಂಕು  ನಿಯಂತ್ರಣಕ್ಕೆ ಬಾರದಿದ್ದಲ್ಲಿ ನಿಷೇಧಾಜ್ಞೆಯನ್ನು ವಿಸ್ತರಿಸಲಾಗುವುದು ಎಂದು ಅಧಿಕಾರಿಗಳು ಸ್ಪಷ್ಟನೆ ನೀಡಿದ್ದಾರೆ.

ಮಂಜೇಶ್ವರ , ಕುಂಬಳೆ , ಬದಿಯಡ್ಕ , ಕಾಸರಗೋಡು ,  ವಿದ್ಯಾನಗರ , ಮೇಲ್ಪರಂಬ , ಬೇಕಲ , ಹೊಸದುರ್ಗ ,  ನೀಲೇಶ್ವರ , ಚಂದೇರ ಪೊಲೀಸ್ ಠಾಣಾ ವ್ಯಾಪ್ತಿ ಹಾಗೂ ಪರಪ್ಪ , ಒಡೆಯಂಚಾಲ್ , ಪನತ್ತಡಿ   ಪೇಟೆಗಳಲ್ಲಿ ಐದಕ್ಕಿಂತ ಅಧಿಕ ಮಂದಿ ಗುಂಪು ಸೇರುವುದನ್ನು ನಿಷೇಧಿಸಲಾಗಿದೆ.

ಸಾಮಾಜಿಕ ಅಂತರ ಕಾಯ್ದುಕೊಂಡು ,  ಸಾಬೂನ್ , ಸ್ಯಾನಿಟೈಸರ್ ಮೂಲಕ  ಕೈ ಗಳನ್ನು ಶುಚಿಗೊಳಿಸಬೇಕು ಎಂದು  ಮನವಿ ಮಾಡಿದ್ದಾರೆ.

ವಿವಾಹ ಸಮಾರಂಭಗಳಿಗೆ  50 ಮಂದಿ , ಮರಣ ಸಂಬಂಧಿ ಕಾರ್ಯಕ್ರಮಗಳಿಗೆ  20 ಮಂದಿಗೆ ಮಾತ್ರ ಭಾಗವಹಿಸಲು ಅವಕಾಶ.
ಧಾರ್ಮಿಕ , ಪ್ರಾರ್ಥನೆ ಕಾರ್ಯಕ್ರಮ ಗಳು ,  ರಾಜಕೀಯ ಪಕ್ಷಗಳ ಸಭೆಗಳು , ಸಾಂಸ್ಕೃತಿಕ , ಸಾಮಾಜಿಕ , ಸಾರ್ವಜನಿಕ  ಕಾರ್ಯಕ್ರಮ ಗಳಿಗೆ 20 ಮಂದಿಗೆ ಮಾತ್ರ ಭಾಗವಹಿಸಲು ಅನುಮತಿ ನೀಡಲಾಗಿದೆ.

ಸಾರ್ವಜನಿಕ ಸ್ಥಳ ,  ಬಸ್ಸು  ನಿಲ್ದಾಣ , ಸಾರ್ವಜನಿಕ ಸಂಚಾರ , ಕಚೇರಿಗಳು , ಉದ್ಯೋಗ ಕೇಂದ್ರ  ಹಾಗೂ  ವ್ಯಾಪಾರ ಮಳಿಗೆ , ಆರೋಗ್ಯ ಕ್ಲಬ್ , ಕ್ರೀಡಾ ತರಬೇತಿ ,  ಪರೀಕ್ಷಾ ಕೇಂದ್ರ ಗಳಲ್ಲಿ ಕೋವಿಡ್ ಮಾನದಂಡಗಳನ್ನು ಕಡ್ಡಾಯವಾಗಿ ಪಾಲಿಸಬೇಕು.

ಜನಜಂಗುಳಿ ಉಂಟಾಗುವ ಮಾರುಕಟ್ಟೆ , ಬಸ್ಸು ತಂಗುದಾಣ  ಮೊದಲಾದೆಡೆ  ಗಳಲ್ಲಿ  ದಿನಕ್ಕೆ ಕನಿಷ್ಠ  ಒಂದು  ಬಾರಿ  ರೋಗಾಣು ಮುಕ್ತ ಔಷಧಿ  ಸಿಂಪಡಿಸಬೇಕು ಎಂದು  ಆದೇಶ ನೀಡಲಾಗಿದೆ .ಈ  ಬಗ್ಗೆ ಸ್ಥಳೀಯ ಸಂಸ್ಥೆ ಕಾರ್ಯದರ್ಶಿಗಳಿಗೆ ನಿರ್ದೇಶನ ನೀಡಲಾಗಿದೆ . ಜನರು ಕೋವಿಡ್  ಮಾನದಂಡಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು . ಕೋವಿಡ್ ಮಾನದಂಡಗಳನ್ನು ಕಟ್ಟುನಿಟ್ಟಾಗಿ ಜಾರಿಗೆ ಗೊಳಿಸುವ ನಿಟ್ಟಿನಲ್ಲಿ ಪೊಲೀಸರು ನಿಗಾ ಇರಿಸಲಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News