×
Ad

ಲಾಠಿಚಾರ್ಜ್ ವೇಳೆ ಕಾರ್ಯಕರ್ತರಿಗೆ ರಕ್ಷಣೆ ನೀಡಿದ ಪ್ರಿಯಾಂಕಾ ಗಾಂಧಿ

Update: 2020-10-03 20:36 IST

ಹೊಸದಿಲ್ಲಿ, ಅ.3: ದಿಲ್ಲಿ-ನೊಯ್ಡ ಡೈರೆಕ್ಟ್(ಡಿಎನ್‌ಡಿ)ಫ್ಲೈ ಓವರ್‌ನ ಟೋಲ್ ಪ್ಲಾಜಾದಲ್ಲಿ ಶನಿವಾರ ಮಧ್ಯಾಹ್ನ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಉತ್ತರಪ್ರದೇಶದ ಪೊಲೀಸರ ನಡುವೆ ನಡೆದ ಸಣ್ಣ ಘರ್ಷಣೆಯ ವೇಳೆ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ರಕ್ಷಕಿಯ ಪಾತ್ರವನ್ನು ನಿರ್ವಹಿಸಿ ಗಮನ ಸೆಳೆದರು.

 ಕಳೆದ ತಿಂಗಳು ಅತ್ಯಾಚಾರ ಹಾಗೂ ಚಿತ್ರಹಿಂಸೆಗೆ ಒಳಗಾಗಿ ಮಂಗಳವಾರ ಮೃತಪಟ್ಟಿರುವ 20ರ ಹರೆಯದ ದಲಿತ ಯುವತಿಯ ಕುಟುಂಬ ಸದಸ್ಯರನ್ನು ಭೇಟಿಯಾಗಲು ಉತ್ತರಪ್ರದೇಶದ ಹತ್ರಸ್‌ಗೆ ತೆರಳುತ್ತಿದ್ದಾಗ ಪೊಲೀಸರು ಪ್ರಿಯಾಂಕಾ ಹಾಗೂ ರಾಹುಲ್‌ರನ್ನು ತಡೆದಾಗ ಘರ್ಷಣೆ ನಡೆದಿತ್ತು.

ಕಡುನೀಲಿ ಬಣ್ಣದ ಕುರ್ತಾ ಹಾಗೂ ಮುಖಕ್ಕೆ ಮಾಸ್ಕ್ ಹಾಕಿಕೊಮಡಿದ್ದ ಪ್ರಿಯಾಂಕಾ ಸಣ್ಣ ಬ್ಯಾರಿಕೇಡ್‌ನ್ನು ದಾಟಿ ಬಿಳಿ ಕುರ್ತಾ ಧರಿಸಿದ್ದ ವ್ಯಕ್ತಿಯ ರಕ್ಷಣೆಗೆ ಧಾವಿಸಿದರು. ಲಾಠಿ ಹಿಡಿದಿದ್ದ ಪೊಲೀಸರು ಅವರನ್ನು ಸುತ್ತುವರಿದರು. ವರದಿಗಾರರು ಈ ದೃಶ್ಯವನ್ನು ತಮ್ಮ ಕ್ಯಾಮರಾದಲ್ಲಿ ಸೆರೆ ಹಿಡಿದರು. ಗಾಯಗೊಂಡಂತೆ ಕಾಣಿಸುತ್ತಿದ್ದ ವ್ಯಕ್ತಿಯನ್ನು ಪ್ರಿಯಾಂಕಾ ಪೊಲೀಸರ ಲಾಠಿ ಏಟಿನಿಂದ ರಕ್ಷಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News