×
Ad

ಛತ್ತೀಸ್‌ಗಡ: ಹಿನ್ನೆಲೆಯಲ್ಲಿ ತಮ್ಮ ನಾಯಕನನ್ನೇ ಕೊಂದ ಮಾವೋವಾದಿಗಳು

Update: 2020-10-03 22:29 IST

ರಾಯಪುರ,ಅ.3: ತನ್ನ ಕಾರ್ಯಕರ್ತರು ಜನಸಮೂಹವನ್ನು ತಲುಪಿ ನಕ್ಸಲ್ ಸಿದ್ಧಾಂತದ ಬಗ್ಗೆ ಅರಿವು ಮೂಡಿಸುವಂತೆ ಮಾಡಲು ಹೆಣಗಾಡುತ್ತಿರುವ ಸಿಪಿಐ (ಮಾವೋವಾದಿ) ಸಂಘಟನೆಯು ಈಗ ತನ್ನೊಳಗೆ ಭಿನ್ನಾಭಿಪ್ರಾಯಗಳ ಹೊಸ ಸವಾಲನ್ನು ಎದುರಿಸುತ್ತಿದೆ.

ಹೊಸ ಬೆಳವಣಿಗೆಯೊಂದರಲ್ಲಿ ಸಂಘರ್ಷದ ಕಣವಾಗಿರುವ ದಕ್ಷಿಣ ಛತ್ತೀಸ್‌ಗಡದ ಬಸ್ತರ್ ಪ್ರದೇಶದ ಬಿಜಾಪುರ ಜಿಲ್ಲೆಯಲ್ಲಿ ಹಿರಿಯ ಮಾವೋವಾದಿ ನಾಯಕ ಮತ್ತು ವಿಭಾಗೀಯ ಸಮಿತಿ ಸದಸ್ಯ ಮೋದಿಯಾಮ್ ವಿಜ್ಜಾ (39)ನನ್ನು ಆತನ ಗುಂಪಿನ ಸದಸ್ಯರೇ ಗುಂಡಿಟ್ಟು ಕೊಂದು ಹಾಕಿದ್ದಾರೆ. ಕೆಲವು ವಿಷಯಗಳಲ್ಲಿ ಭಿನ್ನಾಭಿಪ್ರಾಯಗಳು ಈ ಕೊಲೆಗೆ ಕಾರಣವೆನ್ನಲಾಗಿದೆ.

ಈ ಬಗ್ಗೆ ಸ್ಥಳೀಯ ಗುಪ್ತಚರ ಮಾಹಿತಿಗಳನ್ನು ಸಂಗ್ರಹಿಸಿರುವ ಪೊಲೀಸರು,ಬಂಡುಕೋರರಿಂದ ನಾಗರಿಕರ ಹತ್ಯೆಗಳು ಇತ್ತೀಚಿಗೆ ಹೆಚ್ಚಿರುವುದು ವಿಜ್ಜಾನ ಹತ್ಯೆಗೆ ಕಾರಣವಾಗಿರುವ ಸಾಧ್ಯತೆಯಿದೆ ಎಂದಿದ್ದಾರೆ.

‘ನಮಗೆ ಲಭಿಸಿರುವ ಮಾಹಿತಿಗಳ ಮೇರೆಗೆ ಬಿಜಾಪುರದಲ್ಲಿ ಹೆಚ್ಚಿನ ನಾಗರಿಕ ಸಾವುಗಳು ಮತ್ತು ಗ್ರಾಮಸ್ಥರ ರ್ಯಾಲಿಗಳ ಹಿಂದೆ ವಿಜ್ಜಾ ಇದ್ದ. ಅಮಾಯಕ ಆದಿವಾಸಿಗಳ ವಿರುದ್ಧ ಹಿಂಸಾಚಾರ ಕುರಿತು ಕಾರ್ಯಕರ್ತರಲ್ಲಿ ತೀವ್ರ ಅಸಮಾಧಾನವುಂಟಾಗಿತ್ತು ಎಂದು ನಂಬಲರ್ಹ ಮಾಹಿತಿಗಳು ತಿಳಿಸಿವೆ. ಈಗ ಇಂತಹ ಭಯೋತ್ಪಾದನೆ ತಂತ್ರಗಳು ಮಾವೋವಾದಿಗಳಿಗೆ ನೆರವಾಗುತ್ತಿರುವಂತೆ ಕಂಡು ಬರುತ್ತಿಲ್ಲ,ಬದಲಿಗೆ ವಿಜ್ಜಾ ಮತ್ತು ಆತನ ಗುಂಪಿನ ಸದಸ್ಯರ ನಡುವೆ ಕಂಡುಬಂದಿರುವಂತೆ ಕಾರ್ಯಕರ್ತರಲ್ಲಿ ಅತೃಪ್ತಿಯನ್ನು ಹುಟ್ಟುಹಾಕುತ್ತಿವೆ. ಈ ಘಟನೆಗೆ ಬೇರೆಯೇನಾದರೂ ಕಾರಣವಿತ್ತೇ ಎನ್ನುವುದನ್ನು ಕಂಡುಕೊಳ್ಳಲು ಸಹ ನಾವು ಪ್ರಯತ್ನಿಸುತ್ತಿದ್ದೇವೆ ’ ಎಂದು ತಿಳಿಸಿದ ಬಸ್ತರ್ ವಲಯದ ಐಜಿಪಿ ಸುಂದರರಾಜ್ ಪಿ.ಅವರು,ಇದು ನಿರ್ದಿಷ್ಟ ವಿಷಯವೊಂದರಲ್ಲಿ ಭಿನ್ನಾಭಿಪ್ರಾಯದಿಂದಾಗಿ ಓರ್ವ ಮಾವೋವಾದಿ ಇನ್ನೋರ್ವ ಮಾವೋವಾದಿಯನ್ನು ಕೊಂದಿರುವ ಮೊದಲ ಪ್ರಕರಣವಾಗಿದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News