×
Ad

ಡೆಲ್ಲಿ ಆಟಕ್ಕೆ ಮಂಕಾದ ಕೊಲ್ಕತ್ತಾ: ಅಯ್ಯರ್ ಪಡೆಗೆ 18 ರನ್ ಗಳ ಗೆಲುವು

Update: 2020-10-03 23:46 IST

ಶಾರ್ಜಾ: ರಾಹುಲ್ ತ್ರಿಪಾಠಿ ಹಾಗೂ ಇಯಾನ್ ಮೋರ್ಗನ್ ಕೊನೆಯಲ್ಲಿ ಅಬ್ಬರಿಸಿದರೂ ಕೊಲ್ಕತ್ತಾ ನೈಟ್ ರೈಡರ್ಸ್ ತಂಡವು ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ 18 ರನ್ ಗಳಿಂದ ಸೋತಿದೆ.

ಗೆಲುವಿಗೆ 229 ರನ್ ಗುರಿ ಪಡೆದ ಕೊಲ್ಕತ್ತಾ ನಿಗದಿತ 20 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 210 ರನ್ ಗಳಿಸಿ ಸೋಲೊಪ್ಪಿಕೊಂಡಿತು. ಕೊಲ್ಕತ್ತಾ ಪರ ಶುಭಮನ್ ಗಿಲ್ 28, ನಿತೀಶ್ ರಾಣಾ 58, ಇಯಾನ್ ಮೋರ್ಗನ್ 18 ಎಸೆತಗಳಲ್ಲಿ 44, ರಾಹುಲ್ ತ್ರಿಪಾಠಿ 16 ಎಸೆತಗಳಲ್ಲಿ 36 ರನ್ ಸಿಡಿಸಿದರು.

ಇದಕ್ಕೂ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್ ತಂಡವು ನಿಗದಿತ 20 ಓವರ್ ಗಳಲ್ಲಿ 4 ವಿಕೆಟ್ ನಷ್ಟಕ್ಕೆ 228 ರನ್ ಗಳಿಸಿತು. 

ಆರಂಭಿಕ ಆಟಗಾರ ಪೃಥ್ವಿ ಶಾ 41 ಎಸೆತಗಳಲ್ಲಿ 66 ರನ್ ಗಳಿಸಿದರು.ಮಧ್ಯಮ ಕ್ರಮಾಂಕದಲ್ಲಿ ನಾಯಕ ಶ್ರೇಯಸ್ ಅಯ್ಯರ್ ಭರ್ಜರಿಯಾಗಿ ಬ್ಯಾಟ್ ಬೀಸಿದರು. ಅವರು ಕೇವಲ 38 ಎಸೆತಗಳಲ್ಲಿ 88 ರನ್ ಸಿಡಿಸಿದರು. ರಿಷಬ್ ಪಂತ್ 17 ಎಸೆತಗಳಲ್ಲಿ 38 ರನ್ ಬಾರಿಸಿದರು

ಕೊಲ್ಕತ್ತಾ ಪರ ಆಂಡ್ರೆ ರಸ್ಸೆಲ್ 2 ವಿಕೆಟ್ ಪಡೆದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News