ಹತ್ರಸ್ ಸಂತ್ರಸ್ತೆಯ ಕುಟುಂಬಕ್ಕೆ ಬಿಗಿ ಭದ್ರತೆ: ಉತ್ತರಪ್ರದೇಶ ಸರಕಾರ

Update: 2020-10-05 11:52 GMT

ಲಕ್ನೊ, ಅ.5: ಹತ್ರಸ್ ಜಿಲ್ಲೆಯಲ್ಲಿ ಅತ್ಯಾಚಾರ ಹಾಗೂ ಭೀಕರ ಹಲ್ಲೆಯಿಂದಾಗಿ ದಿಲ್ಲಿ ಆಸ್ಪತ್ರೆಯಲ್ಲಿ ಮೃತಪಟ್ಟಿರುವ ಸಂತ್ರಸ್ತ ದಲಿತ ಯುವತಿಯ ಕುಟುಂಬಕ್ಕೆ ಬಿಗಿ ಭದ್ರತೆ ಒದಗಿಸಲಾಗುವುದು. ಸಂತ್ರಸ್ತೆಯ ಸಹೋದರನಿಗೆ ಇಬ್ಬರು ಗನ್ ಧಾರಿಗಳನ್ನು ಒದಗಿಸಲಾಗುವುದು ಎಂದು ಉತ್ತರಪ್ರದೇಶ ಸರಕಾರದ ಅಧಿಕಾರಿಗಳು ತಿಳಿಸಿದ್ದಾರೆ.

.ಹತ್ರಸ್ ನಲ್ಲಿರುವ ಸಂತ್ರಸ್ತೆಯ ಮನೆಯ ಸುತ್ತ ಬಿಗಿಭದ್ರತೆ ಒದಗಿಸಲಾಗುವುದು. ಸಂತ್ರಸ್ತೆಯ ಕುಟುಂಬ ಸದಸ್ಯರಿಗೂ ಭದ್ರತೆ ನೀಡಲಾಗುವುದು ಎಂದು ಹೆಚ್ಚುವರಿ ಮುಖ್ಯ ಕಾರ್ಯದರ್ಶಿ(ಗೃಹ) ಅವಿನಾಶ್ ಕುಮಾರ್ ಪಿಟಿಐಗೆ ತಿಳಿಸಿದ್ದಾರೆ.

ಗ್ರಾಮದಲ್ಲಿ 12-15 ಪಿಎಸಿ ಸಿಬ್ಬಂದಿಗಳನ್ನು ದಿನದ 24 ಗಂಟೆ ಕುಟುಂಬದ ಭದ್ರತೆಗಾಗಿ ನಿಯೋಜಿಸಲಾಗುವುದು. ಸಂತ್ರಸ್ತೆಯ ಸಹೋದರನಿಗೆ ಇಬ್ಬರು ಭದ್ರತಾ ಸಿಬ್ಬಂದಿ ಭದ್ರತೆ ಒದಗಿಸಲಿದ್ದಾರೆ. ಸುತ್ತಮುತ್ತಲಿನ ಪ್ರದೇಶದಲ್ಲಿ ಯಾವುದೇ ಅಹಿತಕರ ಘಟನೆ ನಡೆಯಬಾರದೆಂಬ ಕಾರಣಕ್ಕೆ ಭದ್ರತೆಯನ್ನು ಹೆಚ್ಚಿಸಲಾಗಿದೆ ಎಂದು ಹತ್ರಸ್ ಪೊಲೀಸರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News