ಉ.ಪ್ರ.: ಬಂದೂಕು ತೋರಿಸಿ ಮಹಿಳೆಯ ಅತ್ಯಾಚಾರ
Update: 2020-10-05 22:32 IST
ಮುಝಪ್ಫರ್‌ನಗರ, ಅ. 5: ಉತ್ತರಪ್ರದೇಶದ ಮುಝಪ್ಫರ್‌ನಗರದಲ್ಲಿ ಬಂದೂಕು ತೋರಿಸಿ ಬೆದರಿಸಿ ಮಹಿಳೆಯೋರ್ವರನ್ನು ಅತ್ಯಾಚಾರಗೈದ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಕಬ್ಬಿನ ತೋಟದಲ್ಲಿ ನನ್ನ ಮೇಲೆ ರವಿವಾರ ಅತ್ಯಾಚಾರ ನಡೆಸಲಾಗಿದೆ ಎಂದು ಆರೋಪಿಸಿ ಮಹಿಳೆ ನೀಡಿದ ದೂರಿನ ಆಧಾರದಲ್ಲಿ ಶರಣ್ ಕುಮಾರ್ (26) ಎಂಬಾತನ ವಿರುದ್ಧ ಪ್ರಕರಣ ದಾಖಲಿಸಿ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇನ್ನೊಂದು ಘಟನೆಯಲ್ಲಿ ವಿವಾಹದ ಆಸೆ ತೋರಿಸಿ ಅಂಧ ಮಹಿಳೆಯೋರ್ವರನ್ನು ಆಕೆಯ ಸಂಬಂಧಿಕನೇ ಅತ್ಯಾಚಾರಗೈದಿದ್ದಾನೆ ಎಂದು ವರದಿಯಾಗಿದೆ. ಆರೋಪಿಯನ್ನು ಬಂಧಿಸಲು ಕಾರ್ಯಾಚರಣೆ ಆರಂಭಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.