ತನ್ನ ಮಕ್ಕಳಿಗೆ ಮೊದಲು ಸಂಸ್ಕಾರ ಕಲಿಸಲಿ: ಬಿಜೆಪಿ ಮುಖಂಡನ ಹೇಳಿಕೆಗೆ ಚಿತ್ರನಟಿಯರ ಇದಿರೇಟು
Update: 2020-10-05 22:44 IST
ಹೊಸದಿಲ್ಲಿ, ಅ.5: ಸಂಸ್ಕಾರದಿಂದ ಮಾತ್ರ ಅತ್ಯಾಚಾರ ಪ್ರಕರಣಗಳನ್ನು ತಡೆಯಬಹುದು ಎಂದು ಉತ್ತರಪ್ರದೇಶ ಬಿಜೆಪಿ ಶಾಸಕ ಸುರೇಂದ್ರ ಸಿಂಗ್ ನೀಡಿದ್ದ ಹೇಳಿಕೆ ಬಗ್ಗೆ ವ್ಯಾಪಕ ಟೀಕೆ, ಆಕ್ರೋಶ ವ್ಯಕ್ತವಾಗಿದೆ. ಅವರು ತಮ್ಮ ಮಕ್ಕಳಿಗೆ ಯಾಕೆ ಸಂಸ್ಕಾರ ಕಲಿಸುತ್ತಿಲ್ಲ? ಎಂದು ಹಿಂದಿ ಚಿತ್ರನಟಿ ಕೃತಿ ಸನೂನ್ ಪ್ರಶ್ನಿಸಿದ್ದಾರೆ. ಅತ್ಯಾಚಾರಕ್ಕೆ ಒಳಗಾಗದಿರುವುದು ಹೇಗೆ ಎಂದು ಹೆಣ್ಣುಮಕ್ಕಳಿಗೆ ಕಲಿಸಿ. ತನ್ನ ಮಾತನ್ನು ಅವರು ಸ್ವತಃ ಕೇಳಬಹುದೇ? ಇಂತಹ ಮನಸ್ಥಿತಿಯನ್ನು ಮೊದಲು ಬದಲಾಯಿಸಬೇಕಿದೆ ಎಂದವರು ಟ್ವೀಟ್ ಮಾಡಿದ್ದಾರೆ.
ಈ ಸಣ್ಣವ್ಯಕ್ತಿ ಹಳೆಯ ಪಾಪಿ ಎಂದು ನಟಿ, ಸಾಮಾಜಿಕ ಕಾರ್ಯಕರ್ತೆ ಸ್ವರಾ ಭಾಸ್ಕರ್ ಟ್ವೀಟ್ ಮಾಡಿ, 2018ರಲ್ಲಿ ಉನ್ನಾವೊ ಅತ್ಯಾಚಾರ ಪ್ರಕರಣದ ಬಗ್ಗೆ ಸುರೇಂದ್ರ ಸಿಂಗ್ ನೀಡಿದ್ದ ಅಸಭ್ಯ, ನಿಂದಾತ್ಮಕ ಹೇಳಿಕೆಯ ಹಳೆಯ ವೀಡಿಯೊವನ್ನು ಶೇರ್ ಮಾಡಿದ್ದಾರೆ.