×
Ad

'ಚಲ್ತೇ ಚಲ್ತೇ' ಚಿತ್ರದ ಖ್ಯಾತಿಯ ಹಿರಿಯ ನಟ, ನಿರ್ಮಾಪಕ ವಿಶಾಲ್ ಆನಂದ್ ನಿಧನ

Update: 2020-10-05 22:47 IST

ಮುಂಬೈ ಅ.5: ಹಿರಿಯ  ನಟ, 'ಚಲ್ತೇ ಚಲ್ತೇ; ಚಿತ್ರದ ಖ್ಯಾತಿಯ ವಿಶಾಲ್ ಆನಂದ್ ದೀರ್ಘ ಸಮಯದ ಅನಾರೋಗ್ಯದಿಂದಾಗಿ ರವಿವಾರ ನಿಧನರಾದರು. ಸೋಮವಾರ ಅವರ ಕುಟುಂಬ ಸದಸ್ಯರು ಈ ವಿಚಾರವನ್ನು ತಿಳಿಸಿದ್ದಾರೆ.

82ನೇ ವಯಸ್ಸಿನಲ್ಲಿ ನಿಧನರಾಗಿರುವ ಆನಂದ್ ಅವರ ಮೂಲ ಹೆಸರು ಭಿಶಮ್ ಕೊಹ್ಲಿ. 'ಹಿಂದೂಸ್ತಾನ್ ಕಿ ಕಸಮ್', 'ಟ್ಯಾಕ್ಸಿ ಡ್ರೈವರ್' ಸಹಿತ 1970ರ ದಶಕದಲ್ಲಿ ಹಲವು ಹಿಂದಿ ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದರು. ಸಿಮಿ ಗರೆವಾಲ್ ಕೂಡ ನಟಿಸಿದ್ದ 'ಚಲ್ತೇ ಚಲ್ತೇ' ಚಿತ್ರ  ಆನಂದ್ ಗೆ ಹೆಚ್ಚು ಖ್ಯಾತಿ ತಂದುಕೊಟ್ಟಿತ್ತು.

'ಚಲ್ತೇ ಚಲ್ತೇ' ಚಿತ್ರದ ನಿರ್ಮಾಪಕರೂ ಆಗಿದ್ದ ವಿಶಾಲ್ ಆನಂದ್ ಚಿತ್ರದ ಯಶಸ್ಸಿಗೆ ಹಿರಿಯ ಸಂಗೀತ ನಿರ್ದೇಶಕ ಬಪ್ಪಿ ಲಹರಿ, ನಿರ್ದೇಶಕ ಸುಂದರ್ ದರ್ ಗೆ ಎಲ್ಲ ಶ್ರೇಯಸ್ಸನ್ನು ನೀಡಿದ್ದರು.

ಆನಂದ್ ಅವರು 'ದಿಲ್ ಸೇ ಮಿಲೇ ದಿಲ್'(1978) ಚಿತ್ರದಲ್ಲಿ ನಟಿಸಿದ್ದರು. 1980ರಲ್ಲಿ ತೆರೆ ಕಂಡಿದ್ದ ಮಿಥುನ್  ಚಕ್ರವರ್ತಿ ನಾಯಕ ನಟನಾಗಿ ನಟಿಸಿರುವ 'ಕಿಸ್ಮತ್' ಚಿತ್ರಕ್ಕೆ ನಿರ್ದೇಶನ ನೀಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News