ಪ್ರಿಯಾಂಕಾ ಗಾಂಧಿ ಹತ್ರಸ್‌ಗೆ ಭೇಟಿ ನೀಡಿದ ಬಳಿಕ 500 ಕಾಂಗ್ರೆಸ್ ಕಾರ್ಯಕರ್ತರ ವಿರುದ್ಧ ಪ್ರಕರಣ ದಾಖಲು

Update: 2020-10-05 17:25 GMT

ನೋಯ್ಡಾ, ಅ. 5: ಕೊರೋನ ಹಬ್ಬುತ್ತಿರುವ ನಡುವೆ ನೋಯ್ಡಾದ ದಿಲ್ಲಿ-ಉತ್ತರಪ್ರದೇಶ ಗಡಿಯಲ್ಲಿ ಕಾನೂನು ಬಾಹಿರವಾಗಿ ಸಭೆ ಸೇರಿದ ಆರೋಪದಲ್ಲಿ ಗೌತಮ ಬುದ್ಧ ನಗರ ಪೊಲೀಸರು 500 ಕಾಂಗ್ರೆಸ್ ಕಾರ್ಯಕರ್ತರ ವಿರುದ್ಧ ಪ್ರಥಮ ಮಾಹಿತಿ ವರದಿ ದಾಖಲಿಸಿದ್ದಾರೆ.

ಕಾಂಗ್ರೆಸ್‌ನ ಗೌತಮ ಬುದ್ಧ ನಗರ ಘಟಕದ ಅಧ್ಯಕ್ಷ ಮನೋಜ್ ಚೌಧರಿ, ನೋಯ್ಡಾ ಘಟಕದ ವರಿಷ್ಠ ಶಹಾಬುದ್ದೀನ್ ಹಾಗೂ ಪಕ್ಷದ ಇತರ 500 ಕಾರ್ಯಕರ್ತರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಅತ್ಯಾಚಾರಕ್ಕೊಳಗಾಗಿ ಹತ್ಯೆಯಾದ ದಲಿತ ಯುವತಿಯ ಕುಟುಂಬವನ್ನು ಭೇಟಿಯಾಗಲು ಶನಿವಾರ ಅಪರಾಹ್ನ ಹತ್ರಸ್‌ಗೆ ತೆರಳುತ್ತಿದ್ದ ದಾರಿಯಲ್ಲಿ ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ, ಕಾಂಗ್ರೆಸ್ ನಾಯಕರು ಹಾಗೂ ಕಾರ್ಯಕರ್ತರನ್ನು ಪೊಲೀಸರು ತಡೆದಿದ್ದರು.

ದಿಲ್ಲಿ ನೋಯ್ಡಾ ಟೋಲ್ ಪ್ಲಾಝಾದಲ್ಲಿ ಗೌತಮಬುದ್ಧ ನಗರ (ನೋಯ್ಡಾ) ಪೊಲೀಸರು ಹಾಗೂ ಕಾಂಗ್ರೆಸ್ ಕಾರ್ಯಕರ್ತರ ನಡುವೆ ಲಘು ಘರ್ಷಣೆ ನಡೆದಿತ್ತು. ಈ ಸಂದರ್ಭ ಪೊಲೀಸರು ಲಾಠಿ ಪ್ರಹಾರ ನಡೆಸಿದ್ದರು. ಪ್ರಿಯಾಂಕಾ ಗಾಂಧಿ ಹಾಗೂ ಕೆಲವು ನಾಯಕರ ಮೇಲೆ ಪೊಲೀಸರು ಹಲ್ಲೆ ನಡೆಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News