ಕೇಂದ್ರದ ಮಾಜಿ ಸಚಿವ ರಶೀದ್ ಮಸೂದ್ ನಿಧನ

Update: 2020-10-05 17:28 GMT

ಸಹಾರನ್‌ಪುರ (ಉತ್ತರಪ್ರದೇಶ), ಅ. 4: ಕೇಂದ್ರದ ಮಾಜಿ ಸಚಿವ ರಶೀದ್ ಮಸೂದ್ (73) ಸೋಮವಾರ ರೂರ್ಕಿ ನರ್ಸಿಂಗ್ ಹೋಮ್‌ನಲ್ಲಿ ನಿಧನರಾದರು. ಕೊರೋನೋತ್ತರ ಅಸ್ವಸ್ಥತೆಗೆ ಚಿಕಿತ್ಸೆ ಪಡೆಯಲು ಮಸೂದ್ ಅವರನ್ನು ಇತ್ತೀಚೆಗೆ ನರ್ಸಿಂಗ್ ಹೋಮ್‌ಗೆ ದಾಖಲಿಸಲಾಗಿತ್ತು ಎಂದು ಅವರ ಸೋದರಳಿಯ ಇಮ್ರಾನ್ ಮಸೂದ್ ತಿಳಿಸಿದ್ದಾರೆ.

‘‘ನನ್ನ ಮಾವ ರಶೀದ್ ಮಸೂದ್ ಅವರು ಕೆಲವು ದಿನಗಳ ಹಿಂದೆ ಕೊರೋನ ಸೋಂಕಿಗೆ ಒಳಗಾಗಿದ್ದರು. ಅನಂತರ ಅವರು ದಿಲ್ಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಗುಣಮುಖರಾಗಿದ್ದರು ಹಾಗೂ ಉತ್ತರಪ್ರದೇಶದ ಸಹಾರನ್‌ಪುರಕ್ಕೆ ಹಿಂದಿರುಗಿದ್ದರು’’ ಎಂದು ಅವರು ತಿಳಿಸಿದ್ದಾರೆ. ಆದರೆ, ಕೆಲವು ದಿನಗಳ ಬಳಿಕ ಅವರ ಆರೋಗ್ಯ ಪರಿಸ್ಥಿತಿ ಹದಗೆಡುತ್ತಾ ಹೋಯಿತು. ಇದರಿಂದ ಅವರನ್ನು ರೂರ್ಕಿ ನರ್ಸಿಂಗ್ ಹೋಮ್‌ನಲ್ಲಿ ದಾಖಲಿಸಲಾಗಿತ್ತು. ಅವರು ಇಂದು ಬೆಳಗ್ಗೆ ನಿಧನರಾದರು ಎಂದು ಇಮ್ರಾನ್ ಮಸೂದ್ ತಿಳಿಸಿದ್ದಾರೆ. ರಶೀದ್ ಮಸೂದ್ ಸಹಾರನ್‌ಪುರದಿಂದ ಐದು ಬಾರಿ ಲೋಕಸಭೆಗೆ ಆಯ್ಕೆಯಾಗಿದ್ದರು.

ಅವರು ಕೆಲವು ಅವಧಿಗೆ ರಾಜ್ಯಸಭೆಗೆ ಕೂಡ ಆಯ್ಕೆಯಾಗಿದ್ದರು. ರಶೀದ್ ಮಸೂದ್ ಅವರು 1989ರ ಲೋಕಸಭಾ ಚುನಾವಣೆಯಲ್ಲಿ ಜನತಾದಳದ ಅಭ್ಯರ್ಥಿಯಾಗಿ ಸಹಾರನ್‌ಪುರದಿಂದ ಸ್ಪರ್ಧಿಸಿ ಜಯಗಳಿಸಿದ್ದರು ಹಾಗೂ ಆರೋಗ್ಯ ಖಾತೆಯ ಸಹಾಯಕ ಸಚಿವರಾಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News