ಹರ್ಯಾಣ ಪ್ರವೇಶಿಸಿದ ಕಾಂಗ್ರೆಸ್ ನ 'ಖೇತಿ ಬಚಾವ್ ಯಾತ್ರೆ'

Update: 2020-10-06 12:02 GMT

ಚಂಡಿಗಡ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೇತೃತ್ವದಲ್ಲಿ ಕೃಷಿ ಮಸೂದೆಗಳ ವಿರುದ್ಧ ನಡೆಯುತ್ತಿರುವ ಖೇತಿ ಬಚಾವ್ ಯಾತ್ರೆಗೆ ಹರ್ಯಾಣದ ಗಡಿಯಲ್ಲಿ ಮಂಗಳವಾರ ಸ್ವಲ್ಪ ಕಾಲ ತಡೆ ಹೇರಲಾಗಿದ್ದು, ಬಳಿಕ ಹರ್ಯಾಣ ಪ್ರವೇಶಿಸಲು ಅವಕಾಶ ನೀಡಲಾಗಿದೆ.

ಕಾಂಗ್ರೆಸ್ ನಾಯಕರ ರ್ಯಾಲಿಗೆ ಷರತ್ತುಬದ್ಧ ಅನುಮತಿ ನೀಡಲಾಗಿದ್ದು, 100ಕ್ಕಿಂತ ಹೆಚ್ಚು ಜನರು ಒಂದೆಡೆ ಸೇರಲು ಅವಕಾಶವಿಲ್ಲ ಎಂದು ಅಂಬಾಲ ಐಜಿಪಿ ಪೂರನ್ ಕುಮಾರ್ ಹೇಳಿದ್ದಾರೆ.

"ಹರ್ಯಾಣದ ಸೇತುವೆ ಸಮೀಪ ನಮ್ಮನ್ನು ತಡೆಯಲಾಗಿದೆ. ನಾನು ಇಲ್ಲಿಂದ ಕದಲುವುದಿಲ್ಲ. ಒಂದು ಗಂಟೆಯಾಗಲಿ, ಐದು ಗಂಟೆಯಾಗಲಿ ನಾನು ಇಲ್ಲಿಯೇ ಕಾದುಕುಳಿತುಕೊಳ್ಳುವೆ' ಎಂದು ರಾಹುಲ್ ಟ್ವೀಟಿಸಿದ್ದಾರೆ.

ಪಕ್ಷದ 'ಖೇತಿ ಬಚಾವೊ ಯಾತ್ರೆ'ಯ ವೇಳೆ ರಾಹುಲ್ ಗಾಂಧಿ ಸ್ವತಃ ಟ್ರ್ಯಾಕ್ಟರ್ ನ್ನು ಚಲಾಯಿಸಿದರು.ರಾಹುಲ್ ರೊಂದಿಗೆ ಪಂಜಾಬ್ ಸಿಎಂ ಕ್ಯಾ.ಅಮರಿಂದರ್ ಸಿಂಗ್ ಹಾಗೂ ಪಕ್ಷದ ರಾಜ್ಯಾಧ್ಯಕ್ಷ ಸುನೀಲ್ ಜಾಖರ್ ಉಪಸ್ಥಿತರಿದ್ದರು. ಹರ್ಯಾಣದ ಕಾಂಗ್ರೆಸ್ ನಾಯಕರು ರಾಹುಲ್ ರನ್ನು ಸ್ವಾಗತಿಸಲು ಸಜ್ಜಾಗಿ ನಿಂತಿದ್ದರು.

ಕುರುಕ್ಷೇತ್ರ ಜಿಲ್ಲೆಯ ಪೆಹೊವಾ ವಲಯದ ಹರ್ಯಾಣ-ಪಂಜಾಬ್ ಬಾರ್ಡರ್ ನಲ್ಲಿ ಖೇತಿ ಬಚಾವೊ ಯಾತ್ರೆ ಪ್ರವೇಶಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News