ಅಜಯ್ ದೇವಗನ್ ಸಹೋದರ ನಿಧನ

Update: 2020-10-06 13:31 GMT

ಹೊಸದಿಲ್ಲಿ: ಅಜಯ್ ದೇವಗನ್ ಸಹೋದರ, ಚಿತ್ರ ನಿರ್ಮಾಪಕ-ನಿರ್ದೇಶಕ ಅನಿಲ್ ದೇವಗನ್ (45 ವರ್ಷ)ಸೋಮವಾರ ರಾತ್ರಿ ನಿಧನರಾಗಿದ್ದಾರೆ. ಈ ಸುದ್ದಿಯನ್ನು  ಬಾಲಿವುಡ್ ನ ಹಿರಿಯ ನಟ ಅಜಯ್ ದೇವಗನ್ ಮಂಗಳವಾರ ಟ್ವೀಟ್ ಮೂಲಕ ಬಹಿರಂಗಪಡಿಸಿದ್ದಾರೆ.

ಅನಿಲ್ ದೇವಗನ್ 2002ರ ಹಿಟ್ ಚಿತ್ರ 'ರಾಜು ಚಾಚಾ' ಹಾಗೂ 2005ರ ತೆರೆ ಕಂಡಿದ್ದ 'ಬ್ಲಾಕ್ ಮೈಲ್' ಸಹಿತ ಹಲವು ಚಿತ್ರಗಳನ್ನು ನಿರ್ದೇಶನ ಮಾಡಿದ್ದರು.  ಅನಿಲ್ ದೇವಗನ್ ಸಾವಿಗೆ ಕಾರಣವೇನೆಂದು ಇನ್ನೂ ತಿಳಿದುಬಂದಿಲ್ಲ.

ಅಜಯ್ ಪ್ರಮುಖ ಪಾತ್ರದಲ್ಲಿದ್ದ ಚಿತ್ರಗಳಲ್ಲಿ ಅನಿಲ್ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ್ದರು.. ಇದರಲ್ಲಿ ಜಾನ್, ಇತಿಹಾಸ್, ಪ್ಯಾರ್ ತೋ ಹೊನಾ ಹಿ ತಾ ಹಾಗೂ ಸನ್ ಆಫ್ ಸರ್ದಾರ್ ಕೂಡ ಸೇರಿದೆ.

ಅಜಯ ದೇವಗನ್ ತಂದೆ, ಸಾಹಸ ನಿರ್ದೇಶಕ ವೀರೂ ದೇವಗನ್ ಕಳೆದ ವರ್ಷ ಮೇ ತಿಂಗಳಲ್ಲಿ ನಿಧನರಾಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News