ಸುಳ್ಳು ಹೇಳಲು ಮೃತ ಯುವತಿಯ ಕುಟುಂಬಕ್ಕೆ ಅಪರಿಚಿತ ವ್ಯಕ್ತಿ 50 ಲಕ್ಷ ರೂ. ನೀಡಿದ್ದಾನೆ: ಪೊಲೀಸ್

Update: 2020-10-06 16:19 GMT

ಲಕ್ನೊ. 4: ಹತ್ರಸ್ ಪ್ರಕರಣದ ನಂತರ ಪೊಲೀಸರು ಸಲ್ಲಿಸಿದ 19 ಪ್ರಥಮ ಮಾಹಿತಿ ವರದಿ (ಎಫ್‌ಐಆರ್)ಗಳಲ್ಲಿ ಒಂದರಲ್ಲಿ ರಾಜ್ಯ ಸರಕಾರದ ಬಗ್ಗೆ ಸುಳ್ಳು ಹೇಳಲು ನಾಲ್ವರಿಂದ ಸಾಮೂಹಿಕ ಅತ್ಯಾಚಾರ ಹಾಗೂ ಹಲ್ಲೆಗೊಳಗಾಗಿ ಮೃತಪಟ್ಟ ದಲಿತ ಯುವತಿ ಕುಟುಂಬಕ್ಕೆ 50 ಲಕ್ಷ ರೂಪಾಯಿ ನೀಡಲಾಗಿದೆ ಎಂದು ಆರೋಪಿಸಲಾಗಿದೆ.

ಹಾಥರಸ್ ಘಟನೆಯ ನಂತರ ಅಪರಿಚಿತ ವ್ಯಕ್ತಿಗಳು ದೇಶದ್ರೋಹ ಹಾಗೂ ಪಿತೂರಿ ನಡೆಸಿದ್ದಾರೆ ಎಂದು ಕೂಡ ಪ್ರಥಮ ಮಾಹಿತಿ ವರದಿಯಲ್ಲಿ ಆರೋಪಿಸಲಾಗಿದೆ. ಸಬ್ ಇನ್ಸ್‌ಪೆಕ್ಟರ್‌ರ ದೂರಿನ ಆಧಾರದಲ್ಲಿ ಹಾಥರಸ್‌ನಲ್ಲಿ ದಾಖಲಿಸಲಾದ 6 ಎಫ್‌ಐಆರ್ ಪೈಕಿ 1 ಎಫ್‌ಐಆರ್‌ನಲ್ಲಿ, ‘‘ಸರಕಾರದ ವಿರುದ್ಧ ಸುಳ್ಳು ಹೇಳಲು ಮೃತಪಟ್ಟ ದಲಿತ ಯುವತಿಯ ಕುಟುಂಬಕ್ಕೆ 50 ಲಕ್ಷ ರೂಪಾಯಿ ನೀಡಲಾಗಿದೆ’’ ಎಂದು ಹೇಳಲಾಗಿದೆ. ಆದರೆ, ಹಣ ನೀಡಿದ ವ್ಯಕ್ತಿ ಯಾರು ಎಂದು ಸ್ಪಷ್ಟಪಡಿಸಿಲ್ಲ.

ವೀಡಿಯೊ ದಾಖಲು ಮಾಡಿಕೊಳ್ಳುವ ಉದ್ದೇಶದಿಂದ ‘‘ಉತ್ತರಪ್ರದೇಶ ಸರಕಾರದ ಬಗ್ಗೆ ತೃಪ್ತಿ ಹೊಂದಿಲ್ಲ’’ ಎಂದು ದಲಿತ ಯುವತಿಯ ಹೆತ್ತವರು ಹೇಳುವಂತೆ ಅಪರಿಚಿತ ಪತ್ರಕರ್ತನೋರ್ವ ಯುವತಿಯ ಸಹೋದರನನ್ನು ಪುಸಲಾಯಿಸಿದ್ದ ಎಂದು ಎಫ್‌ಐಆರ್ ಆರೋಪಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News