ಹತ್ರಸ್ ಯುವತಿಯ ಮೇಲೆ ಅತ್ಯಾಚಾರ ನಡೆದಿಲ್ಲ: ವಿಧಿ ವಿಜ್ಞಾನ ವರದಿ

Update: 2020-10-06 16:54 GMT

ಲಕ್ನೋ, ಅ. 6: ಹತ್ರಸ್ ಪ್ರಕರಣದಲ್ಲಿ ದಲಿತ ಯುವತಿ ಮೇಲೆ ಅತ್ಯಾಚಾರ ನಡೆದ ಪುರಾವೆಗಳು ಇಲ್ಲ ಎಂದು ಜವಾಹರಲಾಲ್ ನೆಹರೂ ವೈದ್ಯಕೀಯ ಕಾಲೇಜಿನ ವಿಧಿವಿಜ್ಞಾನ ಔಷಧ ವಿಭಾಗ ಪ್ರಮಾಣೀಕರಿಸಿದೆ. ಜವಾಹರಲಾಲ್ ನೆಹರೂ ವೈದ್ಯಕೀಯ ಕಾಲೇಜಿನ ವಿಧಿವಿಜ್ಞಾನ ಔಷಧ ವಿಭಾಗ ನೀಡಿದ ಪ್ರಮಾಣ ಪತ್ರವನ್ನು ಉತ್ತರಪ್ರದೇಶ ಸರಕಾರ ಅಫಿಡವಿಟ್ ನೊಂದಿಗೆ ಮಂಗಳವಾರ ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿದೆ. ‘‘ಅತ್ಯಾಚಾರ ನಡೆದ ಯಾವುದೇ ಚಿಹ್ನೆಗಳು ಇಲ್ಲ. ಆದರೆ, ದೈಹಿಕ ಹಲ್ಲೆ (ಕುತ್ತಿಗೆ ಹಾಗೂ ಹಿಂಭಾಗದಲ್ಲಿ ಗಾಯಗಳು)ಯ ಪುರಾವೆಗಳು ಇವೆ’’ ಎಂದು ಪ್ರಮಾಣ ಪತ್ರ ಹೇಳಿದೆ.

ಯುವತಿಯ ಮೇಲೆ ಅತ್ಯಾಚಾರ ಎಸಗಲಾಗಿದೆ ಎಂದು ಕುಟುಂಬ ಹೇಳುತ್ತಿದ್ದರೆ, ರಾಜ್ಯ ಸರಕಾರ ಯುವತಿಯ ಮೇಲೆ ಅತ್ಯಾಚಾರ ನಡೆದಿಲ್ಲ ಎಂದು ಮರಣೋತ್ತರ ಪರೀಕ್ಷೆಯ ವರದಿ ಹೇಳಿರುವುದನ್ನು ನೆನಪಿಸಿದೆ.

ಯುವತಿಯ ಮೇಲೆ ಅತ್ಯಾಚಾರ ನಡೆದಿಲ್ಲ. ನಿಜವಾಗಿ ಯುವತಿಗೆ ಆಕೆಯ ಸಹೋದರ ಥಳಿಸಿದ್ದಾನೆ ಹಾಗೂ ಇದರಿಂದಾದ ಗಾಯಗಳು ಮಾರಣಾಂತಿಕವೆಂದು ಸಾಬೀತಾಗಿದೆ ಎಂದು ಆರೋಪಿಗಳ ಕುಟುಂಬಿಕರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News