ರವಿವಾರ ಬಿಜೆಪಿ ಸೇರಿದ್ದ ಶೂಟರ್ ಶ್ರೇಯಸಿ ಸಿಂಗ್ ಗೆ ವಿಧಾನಸಭಾ ಚುನಾವಣೆಯ ಟಿಕೆಟ್

Update: 2020-10-06 17:06 GMT

 ಪಾಟ್ನಾ, ಅ.6: ಮೂರು ಹಂತದಲ್ಲಿ ನಡೆಯಲಿರುವ ಬಿಹಾರ ವಿಧಾನಸಭಾ ಚುನಾವಣೆಗೆ ಬಿಜೆಪಿ ಮಂಗಳವಾರ 27 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿದೆ.

ಅಕ್ಟೋಬರ್ 28ರಂದು ಮೊದಲ ಹಂತದ ಚುನಾವಣೆ ನಡೆಯಲಿದ್ದು, ಬಿಜೆಪಿಯ ಮೊದಲ ಪಟ್ಟಿಯಲ್ಲಿ ರವಿವಾರವಷ್ಟೇ ಬಿಜೆಪಿಗೆ ಸೇರಿರುವ ಅಂತರ್ ರಾಷ್ಟ್ರೀಯ ಖ್ಯಾತಿಯ ಶೂಟಿಂಗ್ ತಾರೆ ಶ್ರೇಯಸಿ ಸಿಂಗ್ ಅವರಿದ್ದಾರೆ. ಶ್ರೇಯಸಿ ಜಮುಯ್ ಕ್ಷೇತ್ರದಿಂದ ಟಿಕೆಟ್ ಪಡೆದಿದ್ದರೆ, ಮಾಜಿ ಸಂಸದ ಹರಿ ಮಂಝಿ ಬೋಧಗಯಾ ಕ್ಷೇತ್ರದ ಟಿಕೆಟ್ ಪಡೆದಿದ್ದಾರೆ.

ಬಿಹಾರ ಚುನಾವಣೆಗೆ ಆಡಳಿರೂಢ ಎನ್ ಡಿಎ ಮೈತ್ರಿಕೂಟದ  ಸೀಟು ಹಂಚಿಕೆ ಸೂತ್ರ ಅಂತಿಮಗೊಂಡ ಬೆನ್ನಿಗೇ ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News