24 ವಿವಿಗಳು ನಕಲಿ: ಯುಜಿಸಿ ಘೋಷಣೆ

Update: 2020-10-07 17:59 GMT

ಹೊಸದಿಲ್ಲಿ,ಅ.7: ವಿಶ್ವವಿದ್ಯಾಲಯ ಧನಸಹಾಯ ಆಯೋಗವು ಬುಧವಾರ 24 ಸ್ವಘೋಷಿತ,ಮಾನ್ಯತೆಯಿಲ್ಲದ ವಿವಿಗಳ ಪಟ್ಟಿಯನ್ನು ಪ್ರಕಟಿಸಿದ್ದು,ಇವು ನಕಲಿ ವಿವಿಗಳು ಎಂದು ಬಣ್ಣಿಸಿದೆ. ಗರಿಷ್ಠ ಸಂಖ್ಯೆಯ ನಕಲಿ ವಿವಿಗಳು ಉತ್ತರ ಪ್ರದೇಶದಲ್ಲಿದ್ದು,ದಿಲ್ಲಿ ನಂತರದ ಸ್ಥಾನದಲ್ಲಿದೆ.

 ಉತ್ತರ ಪ್ರದೇಶದಲ್ಲಿ ಎಂಟು,ದಿಲ್ಲಿಯಲ್ಲಿ ಏಳು,ಒಡಿಶಾ ಮತ್ತು ಪ.ಬಂಗಾಳಗಳಲ್ಲಿ ತಲಾ ಎರಡು ನಕಲಿ ವಿವಿಗಳಿವೆ.

 ಈ ನಕಲಿ ವಿವಿಗಳ ಬಗ್ಗೆ ಎಚ್ಚರಿಕೆ ವಹಿಸುವಂತೆ ಯುಜಿಸಿ ಕಾರ್ಯದರ್ಶಿ ರಜನೀಶ ಜೈನ್ ಅವರು ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರಿಗೆ ಸೂಚಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News