ಆಕರ್ಷಕ ಕ್ಯಾಚ್ ಪಡೆದು ಐಪಿಎಲ್ ದಾಖಲೆ ಮುರಿದ ಧೋನಿ

Update: 2020-10-07 18:37 GMT
Photo: Twitter

ಅಬುಧಾಬಿ: ಕೋಲ್ಕತಾ ನೈಟ್ ರೈಡರ್ಸ್ ವಿರುದ್ಧ ಬುಧವಾರ ನಡೆದ ಐಪಿಎಲ್ ಪಂದ್ಯದಲ್ಲಿ ಶಿವಂ ಮಾವಿ ನೀಡಿದ ಕ್ಯಾಚ್ ನ್ನು ಆಕರ್ಷಕವಾಗಿ ಪಡೆದ ಚೆನ್ನೈ ಸೂಪರ್ ಕಿಂಗ್ಸ್ ನಾಯಕ ಧೋನಿ  ವಯಸ್ಸು ಕೇವಲ ನಂಬರ್ ಮಾತ್ರ ಎಂದು ತೋರಿಸಿಕೊಟ್ಟರು.

 ಈ ಕ್ಯಾಚ್ ಪಡೆಯುವ ಮೂಲಕ ಧೋನಿ ಐಪಿಎಲ್ ನಲ್ಲಿ ಹೆಚ್ಚು ಕ್ಯಾಚ್ ಗಳನ್ನು ಪಡೆದ ಮೊದಲ ವಿಕೆಟ್ ಕೀಪರ್-ಬ್ಯಾಟ್ಸ್ ಮನ್ ಎಂಬ ಕೀರ್ತಿಗೂ ಭಾಜನರಾದರು. 104 ಕ್ಯಾಚ್ ಗಳನ್ನು ಪಡೆದಿರುವ ಧೋನಿ 103 ಕ್ಯಾಚ್ ಪಡೆದಿದ್ದ ಕೆಕೆಆರ್ ನಾಯಕ ದಿನೇಶ್ ಕಾರ್ತಿಕ್ ದಾಖಲೆಯೊಂದನ್ನು ಮುರಿದರು.

ಕೆಕೆಆರ್ ಇನಿಂಗ್ಸ್ ನ ಕೊನೆಯ ಓವರ್ ನಲ್ಲಿ ಬ್ರಾವೊ ಬೌಲಿಂಗ್ ನಲ್ಲಿ ಶಿವಂ ಬ್ಯಾಟಿಗೆ ತಗಲಿ ಚಿಮ್ಮಿದ ಚೆಂಡು ಧೋನಿಯ ಗ್ಲೌಸ್ ಇಲ್ಲದ ಬಲಗೈಗೆ ಸವರಿ ಮೇಲಕ್ಕೆ ಚಿಮ್ಮಿತು. ಆಗ ಮುಂದಕ್ಕೆ ಜಿಗಿದ ಧೋನಿ ಕ್ಯಾಚ್ ಪಡೆಯಲು ಸಫಲರಾದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News