ನನಗೆ ಕೊರೋನ ಸೋಂಕು ತಗಲಿರುವುದು ‘ದೇವರಿಂದ ಸಿಕ್ಕ ಆಶೀರ್ವಾದ’ ಎಂದ ಟ್ರಂಪ್

Update: 2020-10-08 15:00 GMT

ವಾಶಿಂಗ್ಟನ್, ಅ. 8: ನನಗೆ ಕೊರೋನ ವೈರಸ್ ಸೋಂಕು ತಗಲಿರುವುದು ‘ದೇವರಿಂದ ಸಿಕ್ಕ ಆಶೀರ್ವಾದ’ವಾಗಿದೆ; ಇದು ನನ್ನನ್ನು ಪ್ರಾಯೋಗಿಕ ಕೊರೋನ ವೈರಸ್ ಚಿಕಿತ್ಸೆಗೆ ಒಡ್ಡಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬುಧವಾರ ಹೇಳಿದ್ದಾರೆ.

ಆಸ್ಪತ್ರೆಯಿಂದ ಬಿಡುಗಡೆಗೊಂಡ ಬಳಿಕ ನೀಡಿದ ಮೊದಲ ವೀಡಿಯೊ ಸಂದೇಶದಲ್ಲಿ ಅವರು ಈ ಹೇಳಿಕೆ ನೀಡಿದ್ದಾರೆ.

ತನ್ನ ಕಳೆಗುಂದಿರುವ ಚುನಾವಣಾ ಪ್ರಚಾರಕ್ಕೆ ಶಕ್ತಿ ತುಂಬುವುದಕ್ಕಾಗಿ ತುದಿಗಾಲಲ್ಲಿ ನಿಂತಿರುವ ಟ್ರಂಪ್, ಕೋವಿಡ್-19 ಸೋಂಕಿಗೆ ಒಳಗಾದ ಬಳಿಕ ನಾನು ಚೈತನ್ಯಶಾಲಿಯಾಗಿದ್ದೇನೆ ಎಂಬುದಾಗಿ ಪದೇ ಪದೇ ಹೇಳುತ್ತಿದ್ದಾರೆ. ಅವರು ಈಗಲೂ ಕೊರೋನ ವೈರಸ್ ಸೋಂಕಿತರೇ ಎನ್ನುವುದು ಸ್ಪಷ್ಟವಾಗಿಲ್ಲ.

‘‘ಕೊರೋನ ವೈರಸ್‌ಗೆ ನಾನು ಒಳಗಾಗಿರುವುದು ದೇವರಿಂದ ಸಿಕ್ಕಿದ ಆಶೀರ್ವಾದವಾಗಿದೆ. ಇದು ಸಂಕಷ್ಟದಲ್ಲೂ ಆಶೀರ್ವಾದದಂತಾಗಿದೆ’’ ಎಂದು ಅವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News