ಲೈಂಗಿಕ ದೌರ್ಜನ್ಯ ಪ್ರಕರಣ: ಚಿನ್ಮಯಾನಂದರಿಗೆ ಯುವತಿಯ ಹೇಳಿಕೆ ಪ್ರತಿ ನೀಡಲು ಸುಪ್ರೀಂ ನಕಾರ

Update: 2020-10-08 17:22 GMT

ಮುಂಬೈ, ಅ. 8: ಅತ್ಯಾಚಾರದ ಆರೋಪ ಮಾಡಿದ ಕಾನೂನು ವಿದ್ಯಾರ್ಥಿನಿಯ ಹೇಳಿಕೆ ಪ್ರತಿಯನ್ನು ಕೇಂದ್ರದ ಮಾಜಿ ಸಂಸದ ಹಾಗೂ ಬಿಜೆಪಿ ನಾಯಕ ಚಿನ್ಮಯಾನಂದಗೆ ಪಡೆಯಲು ಅವಕಾಶ ನೀಡಿದ ಅಲಹಾಬಾದ್ ಉಚ್ಚ ನ್ಯಾಯಾಲಯದ ತೀರ್ಪನ್ನು ಸುಪ್ರೀಂ ಕೋರ್ಟ್ ಗುರುವಾರ ತಳ್ಳಿ ಹಾಕಿದೆ.

ಯುವತಿಯ ಹೇಳಿಕೆಯ ಪ್ರತಿಯನ್ನು ಆರೋಪಿಗೆ ಒದಗಿಸುವಂತೆ ಈ ಹಿಂದೆ ಅಲಹಾಬಾದ್ ಉಚ್ಚ ನ್ಯಾಯಾಲಯ 2019 ನವೆಂಬರ್ 7ರಂದು ವಿಚಾರಣಾ ನ್ಯಾಯಾಲಯಕ್ಕೆ ನಿರ್ದೇಶಿಸಿತ್ತು. ಇಂದು ನ್ಯಾಯಮೂರ್ತಿಗಳಾದ ಯು.ಯು. ಲಲಿತ್ ವಿನೀತ್ ಸರನ್ ಹಾಗೂ ಎಸ್. ರವೀಂದ್ರ ಭಟ್ ಅವರನ್ನು ಒಳಗೊಂಡ ಸುಪ್ರೀಂ ಕೋರ್ಟ್ ನ್ಯಾಯ ಪೀಠ ಈ ಆದೇಶವನ್ನು ತಿರಸ್ಕರಿಸಿದೆ.

ಕ್ರಿಮಿನಲ್ ಕೋಡ್‌ನ 164 ವಿಭಾಗದ ಅಡಿಯಲ್ಲಿ ನ್ಯಾಯಾಂಗ ದಂಡಾಧಿಕಾರಿ ಮುಂದೆ ದಾಖಲಿಸಲಾದ ಯಾವುದೇ ಹೇಳಿಕೆಯನ್ನು ವಿಚಾರಣೆ ಸಂದರ್ಭ ಸಾಕ್ಷಿಯಾಗಿ ಒಪ್ಪಿಕೊಳ್ಳಬಹುದು. ಪೊಲೀಸರ ತನಿಖೆಯ ಸಂದರ್ಭ ನೀಡುವ ಹೇಳಿಕೆಗಿಂತ ಈ ಹೇಳಿಕೆಗೆ ಹೆಚ್ಚು ಮೌಲ್ಯಯುತವಾಗಿರುತ್ತದೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಸುಪ್ರೀಂ ಕೋರ್ಟ್ ನವೆಂಬರ್‌ನಲ್ಲಿ ಉಚ್ಚ ನ್ಯಾಯಾಲಯದ ಆದೇಶವನ್ನು ತಡೆ ಹಿಡಿದಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News