×
Ad

“ಪ್ರಧಾನಿ ಮೋದಿ ಭಾರತವನ್ನು ವಿಭಜಿಸುತ್ತಿದ್ದಾರೆ”

Update: 2020-10-08 23:47 IST

ಹೊಸದಿಲ್ಲಿ, ಅ. 8: ಭಾರತದಲ್ಲಿ ಹಿಂದೂ-ಮುಸ್ಲಿಮರನ್ನು ವಿಭಜಿಸುತ್ತಿರುವುದಕ್ಕೆ ನೊಬೆಲ್ ಪುರಸ್ಕೃತ ಜೋಸೆಫ್ ಸ್ಟಿಗ್ಲಿಟ್ಜ್ ಮೋದಿ ಸರಕಾರವನ್ನು ತರಾಟೆಗೆ ತೆಗೆದುಕೊಂಡ ಬಳಿಕ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ‘‘ಎಲ್ಲ ನಂಬಿಕೆಯ ಜನರ ನಡುವೆ ಒಗ್ಗಟ್ಟು ಮೂಡಿಸುವುದು ನನ್ನ ಬದುಕಿನ ಉದ್ದೇಶ’’ ಎಂದು ಹೇಳಿದ್ದಾರೆ.

ಕಳೆದ 250 ವರ್ಷಗಳಿಂದ ಆರ್ಥಿಕ ಸಮೃದ್ಧಿಯ ಮೂಲಗಳಲ್ಲಿ ಸಹಿಷ್ಣುತೆ ಕೂಡ ಒಂದಾಗಿರುವುದರಿಂದ ಜನರನ್ನು ವಿಭಜಿಸುವ ರಾಜಕೀಯವನ್ನು ತೊಡೆದು ಹಾಕಿ ಎಂದು ನರೇಂದ್ರ ಮೋದಿ ನೇತೃತ್ವದ ಸರಕಾರಕ್ಕೆ ಕೊಲಂಬಿಯಾ ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕರಾಗಿರುವ ಸ್ಟಿಗ್ಲಿಟ್ಜ್ ಸಲಹೆ ನೀಡಿದ್ದರು. ಎಫ್‌ಐಸಿಸಿಐ ಆಯೋಜಿಸಿದ್ದ ವೆಬ್ ಕಾನ್ಫರೆನ್ಸ್‌ನಲ್ಲಿ ಮಾತನಾಡಿದ ಸ್ಟಿಗ್ಲಿಟ್ಜ್, ಕೊರೋನ ನಿರ್ವಹಣೆಯ ಕುರಿತು ಕೇಂದ್ರ ಸರಕಾರವನ್ನು ತರಾಟೆಗೆ ತೆಗೆದುಕೊಂಡರು. ವಿಭಜನೆ ರಾಜಕೀಯವು ನಾವು ಏನು ಮಾಡಬೇಕೆಂಬುದರ ವಿರುದ್ಧವಾಗಿದೆ. ಮೋದಿ ಅವರು ನಿಮ್ಮ ದೇಶವನ್ನು ವಿಭಜಿಸಲು ಪ್ರಯತ್ನಿಸುತ್ತಿದ್ದಾರೆ. ಅದು ನಿಮ್ಮ ಆರ್ಥಿಕತೆ ಹಾಗೂ ಸಮಾಜವನ್ನು ದುರ್ಬಲಗೊಳಿಸಲಿದೆ ಎಂದು ಅವರು ಹೇಳಿದರು. ಸ್ಟಿಗ್ಲಿಟ್ಜ್‌ನ ಚಿಂತನೆಗಳನ್ನು ಟ್ವಿಟರ್‌ನಲ್ಲಿ ರಾಹುಲ್ ಗಾಂಧಿ ಹಂಚಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News