ಹತ್ರಾಸ್ ನಲ್ಲಿ ದಲಿತ ಯುವತಿ ಅತ್ಯಾಚಾರ-ಹತ್ಯೆ ಖಂಡಿಸಿ ಮಲಾರ್ ನಲ್ಲಿ ಎಸ್ಕೆಎಸ್ಸೆಸ್ಸೆಫ್ ಪ್ರತಿಭಟನೆ

Update: 2020-10-10 05:14 GMT

ಮಂಗಳೂರು, ಅ.10: ಉತ್ತರ ಪ್ರದೇಶದ ಹತ್ರಾಸ್ ನಲ್ಲಿ ನಡೆದ ದಲಿತ ಯುವತಿಯನ್ನು ಅತ್ಯಾಚಾರಗೈದು ಅಮಾನವೀಯವಾಗಿ ಕೊಲೆಗೈದ ಕೃತ್ಯವನ್ನು ಖಂಡಿಸಿ ಎಸ್ಕೆಎಸ್ಸೆಸ್ಸೆಫ್ ಮಲಾರ್, ಬದ್ರಿಯಾ ನಗರ ಹಾಗೂ ಅರಸ್ತಾನ ಶಾಖೆಯ ಸಂಯುಕ್ತ ಆಶ್ರಯದಲ್ಲಿ

ಮಲಾರ್ ಜಂಕ್ಷನ್ ನಲ್ಲಿ ಕಪ್ಪು ಬಟ್ಟೆ ಧರಿಸಿ ಶುಕ್ರವಾರ ಪ್ರತಿಭಟನೆ ನಡೆಸಲಾಯಿತು.

ಎಸ್ಕೆಎಸ್ಸೆಸ್ಸೆಫ್  ಬದ್ರಿಯಾ ನಗರ ಮಲಾರ್ ಶಾಖಾಧ್ಯಕ್ಷ ರಿಯಾಝ್ ಫೈಝಿ ಎಂ.ಎಸ್. ಪ್ರತಿಭಟನೆಯನ್ನು ಉದ್ಘಾಟಿಸಿದರು.

ಎಸ್ಕೆಎಸ್ಸೆಸ್ಸೆಫ್ ವಿಖಾಯ ದೇರಳಕಟ್ಟೆ ವಲಯ ವರ್ಕಿಂಗ್ ಕನ್ವೀನರ್ ಇರ್ಫಾನ್ ಡಿ. ಮಲಾರ್ ಅಧ್ಯಕ್ಷತೆ ವಹಿಸಿದ್ದರು. ಖಾಲಿದ್-ಬಿನ್-ವಲೀದ್ ಮಸ್ಜಿದ್ ಇಮಾಮ್ ನಾಸಿರ್ ದಾರಿಮಿ ಎಂ.ಎಸ್. ದುಆಗೈದರು.

ಎಸ್ಕೆಎಸ್ಸೆಸ್ಸೆಫ್ ತ್ವಲಬಾ ವಿಂಗ್ ದ.ಕ. ಜಿಲ್ಲಾಧ್ಯಕ್ಷ ಉವೈಸ್ ತೋಕೆ ಮುಖ್ಯ ಭಾಷಣ ಮಾಡಿದರು. ಪಾವೂರು ಗ್ರಾಮ ಪಂಚಾಯತ್ ನಿಕಟಪೂರ್ವ ಅಧ್ಯಕ್ಷ ಫಿರೋಝ್ ಮಲಾರ್ ಪ್ರಾಸ್ತಾವಿಕ ಭಾಷಣ ಮಾಡಿದರು. ಎಸ್ಕೆಎಸ್ಸೆಸ್ಸೆಫ್ ಅರಸ್ತಾನ ಶಾಖಾಧ್ಯಕ್ಷ ಅಲ್ತಾಫ್ ಹಾಮದ್ ಸ್ವಾಗತಿಸಿದರು. ನೌಶಾದ್ ಮಲಾರ್ ವಂದಿಸಿದರು. ಅಶ್ರಫ್ ಫೈಝಿ ಕೆ.ಎಂ. ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News