ಉಪ್ಪಿನಂಗಡಿ: ಪತ್ನಿಗೆ ಆ್ಯಸಿಡ್ ಎರಚಿದ ಪತಿ; ಗಾಯಾಳು ಮೃತ್ಯು

Update: 2020-10-10 17:25 GMT

ಉಪ್ಪಿನಂಗಡಿ : ಮುನಿಸಿಕೊಂಡು ಹೋದ ಪತ್ನಿ ಮನೆಗೆ ಹಿಂತಿರುಗದ ಕೋಪದಲ್ಲಿ ಪತ್ನಿಗೆ ಹಾಗೂ ಆಕೆಗೆ ಆಶ್ರಯ ನೀಡಿದ ಅತ್ತೆಗೆ ಆ್ಯಸಿಡ್ ಎರಚಿ ಗಾಯಗೊಳಿಸಿದ್ದ ಪ್ರಕರಣದಲ್ಲಿ ಶೈನಿ (32) ಎಂಬವರು ಚಿಕಿತ್ಸೆ ಫಲಕಾರಿಯಾಗದೆ ಶನಿವಾರ ಮೃತಪಟ್ಟಿರುವುದಾಗಿ ವರದಿಯಾಗಿದೆ.

ಉಪ್ಪಿನಂಗಡಿ ಪೊಲೀಸ್ ಠಾಣೆ ವ್ಯಾಪ್ತಿಯ ಕೋಣಾಲು ಗ್ರಾಮದ ಪಾಂಡಿಬೆಟ್ಟು ಎಂಬಲ್ಲಿ ಸೆ. 24ರಂದು  ಆರೋಪಿ ಬಿಜು ಥೋಮಸ್ (38)  ತನ್ನ ಪತ್ನಿ ಶೈನಿ ಹಾಗೂ ಆಕೆಗೆ ಚಿಕ್ಕಮ್ಮ ಝಾನ್ಸಿ ಎಂಬವರಿಗೆ ಆ್ಯಸಿಡ್ ಎರಚಿ ಪರಾರಿಯಾಗಿದ್ದನು. ಉಪ್ಪಿನಂಗಡಿ ಪೊಲೀಸರು ಅದೇ ದಿನ ಆರೋಪಿಯನ್ನು ಬಂಧಿಸಿದ್ದರು.

ಗಂಭೀರ ಗಾಯಗೊಂಡಿದ್ದ ಶೈನಿ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಚಿಕಿತ್ಸೆಗೆ  ಸ್ಪಂದಿಸದೆ ಶನಿವಾರ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News