ಬಜ್ಪೆಯಲ್ಲಿ ಜೂನಿಯರ್ ಫ್ರೆಂಡ್ಸ್ ಕ್ರೀಡಾಕೂಟ

Update: 2020-10-11 11:46 GMT

ಬಜ್ಪೆ : ಬಜ್ಪೆ ಡಿವಿಷನ್ ವ್ಯಾಪ್ತಿಯಲ್ಲಿ ವಿವಿಧ ಸ್ಥಳಗಳಲ್ಲಿ ಜೂನಿಯರ್ ಪ್ರೆಂಡ್ಸ್ ಮಕ್ಕಳ ಕ್ರೀಡಾಕೂಟವು ರವಿವಾರ ನಡೆಯಿತು.

ಮ್ಯೂಸಿಕಲ್ ಚ್ಯಾರ್ , ಬಾಲ್ ಪಾಸ್ , ಕಪ್ಪೆ ಓಟ , ಮಿಲಿಟರಿ ಓಟ ಮುಂತಾದ  ಆಟದ ಮೂಲಕ ವಿದ್ಯಾರ್ಥಿಗಳು ಕ್ರೀಡಾಕೂಟದಲ್ಲಿ ಭಾಗವಹಿಸಿ ಮನರಂಜನೆ  ಪಡೆದರು. ಕೊನೆಗೆ ವಿಜೇತರಿಗೆ ಬಹುಮಾನ ವಿತರಿಸಲಾಯಿತು.

ಕ್ರೀಡಾಕೂಟದಲ್ಲಿ ಜೂನಿಯರ್ ಫ್ರೆಂಡ್ಸ್ ಕ್ಯಾಪ್ಟನ್ ಶಿಪ್  ಪ್ರಕ್ರಿಯೆಯು ನಡೆಯಿತು. ಕ್ಯಾಪ್ಟನ್ ಆಗಿ ಅಬ್ರಾನ್ ಹಾಗೂ ವೈಸ್ ಕ್ಯಾಪ್ಟನ್ ಆಗಿ ಅಶಿಕ್ ರನ್ನುಆಯ್ಕೆ ಮಾಡಲಾಯಿತು. ಸುಮಾರು 108 ಮಕ್ಕಳು ಕ್ರೀಡಾಕೂಟದಲ್ಲಿ ಭಾಗವಹಿಸಿದ್ದರು.

ಈ ಸಂದರ್ಭದಲ್ಲಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಬಜ್ಪೆ ಏರಿಯಾ ಅಧ್ಯಕ್ಷ ಅನ್ವರ್, ಜಿಲ್ಲಾ ಸಮಿತಿ ಸದಸ್ಯ ಇಸ್ಮಾಯಿಲ್ ಎಂಜಿನಿಯರ್, ಬಜ್ಪೆ ಗ್ರಾಮ ಪಂಚಾಯತ್ ಮಾಜಿ ಸದಸ್ಯ ನಝೀರ್ ಬಜ್ಪೆ  ಊರ ನಾಗರಿಕರಾದ ಹನೀಫ್ ಪಯಣಿಗ, ಶರೀಫ್ ಲೈಕೋರಿಕ್ಸ್, ಅಝರ್ ಕಿನ್ನೀಪದವು, ಝರಿಯ ಬಜ್ಪೆ, ಸಾದಿಕ್ ಜರಿ, ಅನಿವಾಸಿ ಭಾರತೀಯ ಇಮ್ತಿಯಾಝ್, ರಿಝ್ವಾನ್ ಕಿನ್ನಿಪದವು, ನಝೀರ್ ಕಿನ್ನಿಪಾದವು ಉಪಸ್ಥಿತರಿದ್ದರು.

ಕೊಳಂಬೆ

ಜೂನಿಯರ್ ಫ್ರೆಂಡ್ಸ್ ಕ್ರೀಡಾಕೂಟವು ಸೌಹಾರ್ದ ನಗರ ಮೈದಾನದಲ್ಲಿ ಜರುಗಿತು. ಮ್ಯೂಸಿಕಲ್ ಚ್ಯಾರ್ , ಬಾಲ್ ಪಾಸ್ , ಕಪ್ಪೆ ಓಟ , ಮಿಲಿಟರಿ ಓಟ ಮುಂತಾದ ಆಟದ ಮೂಲಕ ವಿದ್ಯಾರ್ಥಿಗಳು ಮನೋರಂಜನೆ  ಪಡೆದರು. ಕೊನೆಗೆ ವಿಜೇತರಿಗೆ ಬಹುಮಾನ ವಿತರಿಸಲಾಯಿತು.

ಕ್ರೀಡಾಕೂಟದಲ್ಲಿ ಜೂನಿಯರ್ ಫ್ರೆಂಡ್ಸ್ ಕ್ಯಾಪ್ಟನ್ ಶಿಪ್  ಪ್ರಕ್ರಿಯೆಯು ನಡೆಯಿತು. ಕ್ಯಾಪ್ಟನ್ ಆಗಿ ಸುಲ್ತಾನ್ ಹಾಗೂ ವೈಸ್ ಕ್ಯಾಪ್ಟನ್ ಆಗಿ  ಶಾಹಿಲ್ ರನ್ನು ಆಯ್ಕೆ ಮಾಡಲಾಯಿತು. ಸುಮಾರು 80 ಮಕ್ಕಳು ಕ್ರೀಡಾಕೂಟದಲ್ಲಿ ಭಾಗವಹಿಸಿದ್ದರು.

ಕಾರ್ಯ ಕ್ರಮದಲ್ಲಿ ಕ್ಯಾಂಪಸ್ ಫ್ರಂಟ್ ಜಿಲ್ಲಾ ಕೋಶಾಧಿಕಾರಿ ಶರ್ಫುದ್ದೀನ್,  ಪಾಪ್ಯುಲರ್ ಫ್ರಂಟ್ ಸುಂಕದಕಟ್ಟೆ ಏರಿಯಾ ಕಾರ್ಯದರ್ಶಿ ಸಫ್ರಾನ್ , ಸುಂಕದಕಟ್ಟೆ ಯುನಿಟ್ ಕಾರ್ಯದರ್ಶಿ ರಹ್ಮತುಲ್ಲಾ , ಕೊಳಂಬೆ ಯುನಿಟ್‌ ಅಧ್ಯಕ್ಷ ಬಶೀರ್, ಕಾರ್ಯದರ್ಶಿ ಅಲ್ತಾಫ್ ಉಪಸ್ತಿತರಿದ್ದರು.

ಪೆರ್ಮುದೆ

ಜೂನಿಯರ್ ಫ್ರೆಂಡ್ಸ್ ಕ್ರೀಡಾಕೂಟವು ಪೆರ್ಮುದೆ ಮೈದಾನದಲ್ಲಿ ಜರುಗಿತು. ಮ್ಯೂಸಿಕಲ್ ಚೆರ್ , ಬಾಲ್ ಪಾಸ್ , ಕಪ್ಪೆ ಓಟ , ಮಿಲಿಟರಿ ಓಟ ಮುಂತಾದ ವ ಆಟಗಳ ಮೂಲಕ ವಿದ್ಯಾರ್ಥಿಗಳು ಮನೊರಂಜನೆ  ಪಡೆದರು. ಕೊನೆಗೆ ವಿಜೇತರಿಗೆ ಬಹುಮಾನ ವಿತರಿಸಲಾಯಿತು.

ಸುಮಾರು 60 ಮಕ್ಕಳು ಕ್ರೀಡಾಕೂಟದಲ್ಲಿ ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ  ಪಾಪ್ಯುಲರ್ ಫ್ರಂಟ್ ಸುಂಕದಕಟ್ಟೆ ವಲಯ ಅಧ್ಯಕ್ಷ ಬಶೀರ್, ಪೆರ್ಮುದೆ ಜಮಾತ್ ಅಧ್ಯಕ್ಷರಾದ ಫಯಾಝ್, ರೋಯಲ್ ಫ್ರೆಂಡ್ಸ್‌ ಅಧ್ಯಕ್ಷ ಖಲೀಲ್, ಇರ್ಷಾದ್ ಬಜ್ಪೆ  ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News