ಇರಾನ್ ಪರಮಾಣು ಒಪ್ಪಂದಕ್ಕೆ ಚೀನಾ ಬೆಂಬಲ

Update: 2020-10-11 16:28 GMT

ಬೀಜಿಂಗ್, ಅ. 11: ಇರಾನ್ ಜಗತ್ತಿನ ಪ್ರಬಲ ದೇಶಗಳೊಂದಿಗೆ ಮಾಡಿಕೊಂಡಿರುವ ಪರಮಾಣು ಒಪ್ಪಂದಕ್ಕೆ ಚೀನಾ ಬೆಂಬಲ ವ್ಯಕ್ತಪಡಿಸಿದೆ.

ಚೀನಾದ ಟೆಂಗ್‌ಚಾಂಗ್ ನಗರದಲ್ಲಿ ಶನಿವಾರ ಇರಾನ್ ವಿದೇಶ ಸಚಿವ ಜವಾದ್ ಝಾರಿಫ್ ಜೊತೆ ಮಾತುಕತೆ ನಡೆಸಿದ ಚೀನಾ ವಿದೇಶ ಸಚಿವ ವಾಂಗ್ ಯಿ, ಇರಾನ್‌ಗೆ ಚೀನಾದ ಬೆಂಬಲವನ್ನು ಘೋಷಿಸಿದರು. ಅದೇ ವೇಳೆ, ಮಧ್ಯಪ್ರಾಚ್ಯದಲ್ಲಿ ಉಂಟಾಗಿರುವ ಉದ್ವಿಗ್ನತೆಯನ್ನು ಶಮನಗೊಳಿಸಲು ಹೊಸ ವೇದಿಕೆಯೊಂದನ್ನು ರಚಿಸುವ ಅಗತ್ಯವನ್ನೂ ಅವರು ಪ್ರತಿಪಾದಿಸಿದರು.

2015ರಲ್ಲಿ ಸಹಿ ಹಾಕಲಾಗಿರುವ ಪರಮಾಣು ಒಪ್ಪಂದದಿಂದ ಅಮೆರಿಕ ಈಗಾಗಲೇ ಹೊರಬಂದಿದೆ.

‘‘ವಲಯದ ಎಲ್ಲ ಭಾಗೀದಾರರಿಗೆ ಸಮಾನ ಅವಕಾಶವಿರುವ ಪ್ರಾದೇಶಿಕ ಬಹುಪಕ್ಷೀಯ ಮಾತುಕತೆ ವೇದಿಕೆಯೊಂದನ್ನು ನಿರ್ಮಿಸುವ ಪ್ರಸ್ತಾಪವನ್ನು ಚೀನಾ ಹೊಂದಿದೆ’’ ಎಂದು ಚೀನಾದ ವಿದೇಶ ಸಚಿವಾಲಯ ನೀಡಿದ ಹೇಳಿಕೆಯೊಂದು ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News