ಜೆಎಂಎಂ ನಾಯಕ, ಪತ್ನಿಯ ಹತ್ಯೆ
Update: 2020-10-11 22:06 IST
ರಾಂಚಿ, ಅ.11: ಜಾರ್ಖಂಡ್ ಮುಕ್ತಿ ಮೋರ್ಚಾ(ಜೆಎಂಎಂ)ನ ಹಿರಿಯ ಮುಖಂಡ ಹಾಗೂ ಅವರ ಪತ್ನಿಯನ್ನು ಅಪರಿಚಿತ ದುಷ್ಕರ್ಮಿಗಳು ಹತ್ಯೆ ಮಾಡಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.
ಜೆಎಂಎಂ ಧನಬಾದ್ ನಗರ ಘಟಕಾಧ್ಯಕ್ಷ ಶಂಕರ್ ರವಾನಿ ಹಾಗೂ ಅವರ ಪತ್ನಿ ಬಾಲಿಕಾ ದೇವಿಯ ಮೃತದೇಹ ಅವರ ಮನೆಯಲ್ಲಿ ರವಿವಾರ ಬೆಳಿಗ್ಗೆ ಪತ್ತೆಯಾಗಿದೆ. ಮೃತದೇಹದ ಬಳಿಯಿದ್ದ 9 ಎಂಎಂ ಪಿಸ್ತೂಲ್‌ನ ಕಾಲಿ ಕಾರ್ಟ್ರಿಡ್ಜ್ ಮತ್ತು ಚೂರಿಯನ್ನು ವಶಕ್ಕೆ ಪಡೆಯಲಾಗಿದೆ. ಗುಂಡು ಹಾರಿಸಿ, ಚೂರಿಯಿಂದ ಇರಿದು ಹತ್ಯೆ ಮಾಡಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ ಎಂದು ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ.
ಎರಡು ಕುಟುಂಬಗಳ ನಡುವಿನ ಹಳೆಯ ದ್ವೇಷ ಘಟನೆಗೆ ಕಾರಣವಾಗಿರಬಹುದು ಎಂದು ಪೊಲೀಸರು ಹೇಳಿದ್ದಾರೆ. ರೈನ್‌ಬೊ ಸಮೂಹ ಸಂಸ್ಥೆಗಳ ಅಧ್ಯಕ್ಷ ಧೀರೇಂದ್ರ ರವಾನಿಯ ಕೊಲೆ ಪ್ರಕರಣದ ಆರೋಪಿಯಾಗಿದ್ದ ಶಂಕರ್ ರವಾನಿಯ ಹಿರಿಯ ಪುತ್ರ ಕುಣಾಲ್ ರವಾನಿಯನ್ನು 2017ರಲ್ಲಿ ಹತ್ಯೆ ಮಾಡಲಾಗಿತ್ತು.