ಬೈಡನ್‌ಗೆ ಮತ ಹಾಕಿ: ಅಮೆರಿಕ ಮತದಾರರಿಗೆ ಗ್ರೆಟಾ ತನ್‌ಬರ್ಗ್ ಮನವಿ

Update: 2020-10-11 16:41 GMT
Photo: Facebook/Greta Thunberg

ಸ್ಟಾಕ್‌ಹೋಮ್ (ಸ್ವೀಡನ್), ಅ. 11: ಹವಾಮಾನ ಬದಲಾವಣೆ ವಿರುದ್ಧದ ಹೋರಾಟದಲ್ಲಿ ಅಮೆರಿಕದ ಅಧ್ಯಕ್ಷೀಯ ಚುನಾವಣೆ ಮಹತ್ವದ ಪಾತ್ರ ವಹಿಸಲಿದ್ದು, ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿ ಜೋ ಬೈಡನ್‌ರನ್ನು ಆರಿಸುವಂತೆ ಸ್ವೀಡನ್‌ನ ಹದಿಹರಯದ ಪರಿಸರ ಹೋರಾಟಗಾರ್ತಿ ಗ್ರೆಟಾ ತನ್‌ಬರ್ಗ್ ಶನಿವಾರ ಅಮೆರಿಕದ ಮತದಾರರಿಗೆ ಕರೆ ನೀಡಿದ್ದಾರೆ.

‘‘ನಾನು ಯಾವತ್ತೂ ಪಕ್ಷಾಧಾರಿತ ರಾಜಕೀಯವನ್ನು ಮಾಡುವುದಿಲ್ಲ. ಆದರೆ, ಮುಂಬರುವ ಅಧ್ಯಕ್ಷೀಯ ಚುನಾವಣೆಯು ಅದೆಲ್ಲಕ್ಕಿಂತಲೂ ಮೇಲಿದೆ’’ ಎಂದು ‘ಫ್ರಾಯ್ಡೇಸ್ ಫಾರ್ ಫ್ಯೂಚರ್’ ಪರಿಸರ ಚಳವಳಿಯ ಸ್ಥಾಪಕಿಯಾಗಿರುವ 17 ವರ್ಷದ ಗ್ರೆಟಾ ಟ್ವಿಟರ್‌ನಲ್ಲಿ ಹೇಳಿದ್ದಾರೆ.

‘‘ಪರಿಸರ ದೃಷ್ಟಿಯಿಂದ ಈವರೆಗೆ ಆಗಿರುವುದು ಏನೂ ಸಾಲದು. ನೀವೆಲ್ಲರೂ ಸಂಘಟಿತರಾಗಿ ಹಾಗೂ ಬೈಡನ್ ಪರವಾಗಿ ಮತ ಚಲಾಯಿಸಿ’’ ಎಂದು ಅವರು ಮನವಿ ಮಾಡಿದ್ದಾರೆ.

ನವೆಂಬರ್ 3ರಂದು ನಡೆಯಲಿರುವ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಪ್ರತಿಪಕ್ಷ ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿ ಬೈಡನ್ ಹಾಲಿ ಅಧ್ಯಕ್ಷ ಹಾಗೂ ರಿಪಬ್ಲಿಕ್ ಪಕ್ಷದ ಡೊನಾಲ್ಡ್ ಟ್ರಂಪ್‌ರನ್ನು ಎದುರಿಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News