ಕೊರೋನದಿಂದಾಗಿ ಸಂಪಾದನೆ ಕಳೆದುಕೊಂಡ ಕೇರಳದ ವೃದ್ಧೆ: ವೀಡಿಯೊ ವೈರಲ್

Update: 2020-10-11 18:16 GMT

ತಿರುವನಂತಪುರ: ಸಾಮಾಜಿಕ ಜಾಲತಾಣ ಈ ಕ್ಷಣದಲ್ಲಿ ಉತ್ತಮ ಕೆಲಸದಿಂದ ಮಿಂಚುತ್ತಿದೆ. ಕೊರೋನ ವೈರಸ್ ನಿಂದ ಏಕಾಏಕಿ ತೊಂದರೆಗಳನ್ನು ಎದುರಿಸುತ್ತಿರುವ ಜನರಿಗೆ ಹಾಗೂ ಸಣ್ಣ ಉದ್ಯಮಗಳಿಗೆ ಸಹಾಯ ಮಾಡಲು ನೆಟ್ಟಿಗರು ಒಗ್ಗೂಡುತ್ತಿದ್ದಾರೆ. ಇದೀಗ ಕೇರಳದ ಓರ್ವ ವೃದ್ಧೆಯ ವೀಡಿಯೊ ವೈರಲ್  ಆಗುತ್ತಿದೆ. ನಟಿ ರಿಚಾ ಚಡ್ಟಾ ಕೂಡ ವೃದ್ಧೆಯ ಸಹಾಯಕ್ಕಾಗಿ ಮೊರೆ ಇಟ್ಟಿದ್ದಾರೆ.

ಪಾರ್ವತಿ ಅಮ್ಮಾಸಂಪಾದನೆಗಾಗಿ ಪರದಾಡುತ್ತಿರುವ ಹೃದಯ ಕಲಕುವ ಕಥೆಯನ್ನು ಪತ್ರಕರ್ತ ಆರಿಫ್ ಶಾ ಹಂಚಿಕೊಂಡಿದ್ದಾರೆ. "ಕೇರಳದ ಕಥೆ: ಈ ವೃದ್ದೆ ತನ್ನ ಕುಟುಂಬವನ್ನು ಪೋಷಿಸುವ ಸಲುವಾಗಿ ಢಾಬಾವನ್ನು  ನಡೆಸುತ್ತಿದ್ದಾರೆ. ಇವರಿಗೆ ಗ್ರಾಹಕರಿಲ್ಲ. ಹೀಗಾಗಿ ಸಂಪಾದನೆಗಾಗಿ ಪರದಾಡುತ್ತಿದ್ದಾರೆ. ಇದು ಮನ್ನಾಕ್ಕಾಡ್ ಬಳಿಯ ಕರಿಂಬಾದಲ್ಲಿರುವ ಪಾರ್ವತಿ ಅಮ್ಮ ಅವರ ರುಚಿಕರವಾದ ಉಪಾಹಾರ ಗೃಹವಾಗಿದೆ. ಬಾಬಾ ಕಾ ಢಾಬಾ ಬಳಿಕ ಕೇರಳದವರು ಈ ವೃದ್ಧೆಯ ಸಹಾಯಕ್ಕೆ ಬರಬೇಕಾಗಿದೆ'' ಎಂದು ಬರೆದಿದ್ದಾರೆ.

ಕೇರಳದ ಮನ್ನಾಕ್ಕಾಡ್ ನ ಕರಿಂಬದಲ್ಲಿ ಪಾರ್ವತಿ ಅಮ್ಮಾ ಅವರ ಢಾಬಾವಿದೆ. ಢಾಬಾದಿಂದ ಗಳಿಸುತ್ತಿದ್ದ ಸಂಪಾದನೆಯನ್ನು ಕುಟುಂಬ ಸಾಕಲು ಬಳಸುತ್ತಿದ್ದರು. ಆದರೆ ಕೊರೋನದಿಂದಾಗಿ ಅವರಿಗೆ ಗ್ರಾಹಕರೇ ಬರುತ್ತಿಲ್ಲ. ಹೀಗಾಗಿ ಜೀವನ ಸಾಗಿಸುವುದೇ ದುಸ್ತರವಾಗಿದೆ.

ವೀಡಿಯೊ ಅಂತರ್ಜಾಲದಲ್ಲಿ ವೈರಲ್ ಆಗುತ್ತಿದ್ದಂತೆಯೇ ವೃದ್ಧ ಮಹಿಳೆಯ ವೀಡಿಯೊವನ್ನು ಟ್ವಿಟರ್ ನಲ್ಲಿ ರವಿವಾರ ಹಂಚಿಕೊಂಡಿರುವ ನಟಿ ರಿಚಾ ಚಡ್ಡಾ ಗ್ರಾಹಕರಿಲ್ಲದೆ ಸಂಪಾದನೆ ಕೊರತೆಯಿಂದ ಪರದಾಡುತ್ತಿರುವ ವೃದ್ಧೆಯ ಸಂಕಷ್ಟವನ್ನು ಬಿಚ್ಚಿಟ್ಟಿದ್ದಾರೆ. "ಪಾರ್ವತಿಯಮ್ಮಾರನ್ನು ಎಲ್ಲರಿಗೂ ತೋರಿಸಿ, ಬನ್ನಿ ಕರಂಬಾಕ್ಕೆ'' ಎಂದು ಟ್ವೀಟ್ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News