ಎಸ್ಕೆಎಸ್ಸೆಸ್ಸೆಫ್ ಉಪ್ಪಿನಂಗಡಿ ವಲಯ ಟ್ರೆಂಡ್ ನೂತನ ಸಮಿತಿ ರಚನೆ

Update: 2020-10-12 06:27 GMT

ಉಪ್ಪಿನಂಗಡಿ: ಎಸ್ಕೆಎಸ್ಸೆಸ್ಸೆಫ್ ಟ್ರೆಂಡ್ ಉಪ್ಪಿನಂಗಡಿ ವಲಯ ನೂತನ ಸಮಿತಿ ರಚನೆಯು ಮಲಿಕ್ ದೀನಾರ್ ಜುಮಾ ಮಸ್ಜಿದ್ ಸಭಾಂಗಣದಲ್ಲಿ ನಡೆಯಿತು.

ಎಸ್ಕೆಎಸ್ಸೆಸ್ಸೆಫ್ ಉಪ್ಪಿನಂಗಡಿ ವಲಯ ಸಂಘಟನಾ ಕಾರ್ಯದರ್ಶಿ ಜಬ್ಬಾರ್ ಮುಸ್ಲಿಯಾರ್ ಕರಾಯ ದುವಾ ನೆರವೇರಿಸಿದರು.

ಎಸ್ಕೆಎಸ್ಸೆಸ್ಸೆಫ್ ಉಪ್ಪಿನಂಗಡಿ ವಲಯ ಉಪಾಧ್ಯಕ್ಷರಾದ ಯುಸೂಫ್ ಹಾಜಿ ಪೇದಮಲೆ ಅಧ್ಯಕ್ಷತೆ ವಹಿಸಿದರು. ಸಭೆಯಲ್ಲಿ ಎಸ್ಕೆಎಸ್ಸೆಸ್ಸೆಫ್ ಉಪ್ಪಿನಂಗಡಿ ವಲಯ ಪ್ರಧಾನ ಕಾರ್ಯದರ್ಶಿ ಹಾರೀಶ್ ಕೌಸರಿ ಕಾರ್ಯಕ್ರಮ ಉದ್ಘಾಟನೆ ಮಾಡಿದರು. ಎಸ್ಕೆಎಸ್ಸೆಸ್ಸೆಫ್ ಉಪ್ಪಿನಂಗಡಿ ವಲಯ ಟ್ರೆಂಡ್ ಸಮಿತಿ ಉಸ್ತುವಾರಿ ರಾಝೀಕ್ ಆತೂರು ಸ್ವಾಗತ ಮಾಡಿದರು. ಎಸ್ಕೆಎಸ್ಸೆಸ್ಸೆಫ್ ದಕ್ಷಿಣ ಕನ್ನಡ ಜಿಲ್ಲಾ ಟ್ರೆಂಡ್ ಕನ್ವೀನರ್ ಸಮದ್ ಸರ್ ಸಾಲೆತ್ತೂರು ಟ್ರೆಂಡ್ ಕುರಿತು ವಿಷಯ ಮಂಡನೆ ಮಾಡಿದರು. ನಂತರ ಎಸ್ಕೆಎಸ್ಸೆಸ್ಸೆಫ್ ಉಪ್ಪಿನಂಗಡಿ ವಲಯ ಟ್ರೆಂಡ್ ನೂತನ ಸಮಿತಿಯನ್ನು ರಚನೆ ಮಾಡಲಾಯಿತು.

ಚೇರ್ಮನ್ ಯಾಗಿ ಅನ್ವರ್ ಸರ್ ಕೋಲ್ಪೆ, ವೈಸ್ ಚೇರ್ಮನ್ ಯಾಗಿ ಝೈನ್ ಆತೂರು ಹಾಗೂ ರಶೀದ್ ಕರಾಯ, ಕನ್ವೀನರ್ ಯಾಗಿ ಸೈಪುದ್ದೀನ್ ಕುಂಡಾಜೆ, ವೈಸ್ ಕನ್ವೀನರ್ ಯಾಗಿ ಮುಝಮ್ಮಿಲ್ ಆತೂರು ಹಾಗೂ ಆಸೀಫ್ ಪೆರ್ನೆ , ಕೋಶಾಧಿಕಾರಿಯಾಗಿ ಝುಬೈರ್ ಜೋಗಿಬೆಟ್ಟು, ವರ್ಕಿಂಗ್ ಕಾರ್ಯದರ್ಶಿಯಾಗಿ ಇಮ್ತಿಯಾಝ್ ಆತೂರು, ಮೀಡಿಯಾ ಉಸ್ತುವಾರಿ ಯಾಗಿ ಝಬೈರ್ ಗಂಡಿಬಾಗಿಲು ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರಾಗಿ ಮುಹಮ್ಮದ್ ರಾಫದ್ , ಸುಫೈನ್ ಕರಾಯ, ಫಾರೂಕ್ ಉಪ್ಪಿನಂಗಡಿ, ಹಪೀಫ್ ಆತೂರು, ಇರ್ಷಾದ್ ಕರಾಯ, ಸಿದ್ದೀಕ್ ಮುನೀರ್ ಆತೂರು, ಕಬೀರ್ ಕುಂಡಾಜೆ, ಇಕ್ಬಾಲ್‌ ಜೋಗಿಬೆಟ್ಟು ಆಯ್ಕೆಯಾದರು.

ಸಭೆಯ ಅಧ್ಯಕ್ಷತೆ ವಹಿಸಿದ್ದ ಯುಸೂಫ್ ಹಾಜಿ ಪೇದಮಲೆ ಅಧ್ಯಕ್ಷತೆ ಭಾಷಣ ನಡೆಸಿದ ನೂತನ ಸಮಿತಿಗೆ ಪ್ರೋತ್ಸಾಹ ಮಾತುಗಳು ಹೇಳಿದರು. ಎಸ್ಕೆಎಸ್ಸೆಸ್ಸೆಫ್ ಉಪ್ಪಿನಂಗಡಿ ವಲಯ ಸಂಘಟನಾ ಕಾರ್ಯದರ್ಶಿ ಜಬ್ಬಾರ್ ಮುಸ್ಲಿಯಾರ್ ಕರಾಯ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News