ಆರ್‌ಸಿಬಿ ವಿರುದ್ಧ ಕೆಕೆಆರ್ ಗೆ 82 ರನ್ ಗಳ ಹೀನಾಯ ಸೋಲು

Update: 2020-10-12 17:51 GMT

ಶಾರ್ಜಾ: ರಾಯಲ್ ಚಾಲೆಂಜರ್ಸ್ ಬೆಂಗಳೂರು ನೀಡಿದ ಬೃಹತ್ ಮೊತ್ತದ ಗುರಿಯನ್ನು ಬೆನ್ನಟ್ಟಲು ಎಡವಿದ ಕೊಲ್ಕತ್ತಾ ನೈಟ್ ರೈಡರ್ಸ್ ತಂಡವು 82 ರನ್ ಗಳ ಹೀನಾಯ ಸೋಲು ಕಂಡಿದ್ದು, ಬೆಂಗಳೂರು ತಾನಾಡಿದ 7ನೇ ಪಂದ್ಯದಲ್ಲಿ ಐದರಲ್ಲಿ ಗೆಲುವು ದಾಖಲಿಸಿದೆ.

ಗೆಲುವಿಗೆ 195 ರನ್ ಗುರಿ ಪಡೆದ ಕೊಲ್ಕತ್ತಾ ನಿಗದಿತ 20 ಓವರ್ ಗಳಲ್ಲಿ 9 ವಿಕೆಟ್ ನಷ್ಟಕ್ಕೆ ಕೇವಲ 112 ರನ್ ಗಳಿಸಿ ಸೋಲೊಪ್ಪಿಕೊಂಡಿತು. ಶುಭಮನ್ ಗಿಲ್ 25 ಎಸೆತಗಳಲ್ಲಿ 34 ರನ್ ಬಾರಿಸಿದರು. ಉಳಿದಂತೆ ಆ್ಯಂಡ್ರೆ ರಸ್ಸೆಲ್ (16) ಮತ್ತು ರಾಹುಲ್ ತ್ರಿಪಾಠಿ (16) ಮಾತ್ರ ಎರಡಂಕಿ ರನ್ ಗಳಿಸಿದರು.

ಬೆಂಗಳೂರು ಪರ ವಾಶಿಂಗ್ಟನ್ ಸುಂದರ್ 2 ವಿಕೆಟ್ ಪಡೆದರು. 

ಇದಕ್ಕೂ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ನಿಗದಿತ 20 ಓವರ್ ಗಳಲ್ಲಿ 2 ವಿಕೆಟ್ ನಷ್ಟಕ್ಕೆ 194 ರನ್ ಗಳಿಸಿತು. ಆರಂಭಿಕ ಆಟಗಾರ ಆರೋನ್ ಫಿಂಚ್ 47 ಹಾಗೂ ದೇವದತ್ತ ಪಡಿಕ್ಕಲ್ 32, ನಾಯಕ ವಿರಾಟ್ ಕೊಹ್ಲಿ 28 ಎಸೆತಗಳಲ್ಲಿ 33 ರನ್ ಬಾರಿಸಿದರು. ಕೊನೆಯಲ್ಲಿ ಡಿವಿಲಿಯರ್ಸ್ ಕೇವಲ 33 ಎಸೆತಗಳಲ್ಲಿ 73 ರನ್ ಸಿಡಿಸಿ ತಂಡಕ್ಕೆ ಆಸರೆಯಾದರು.

ಕೊಲ್ಕತ್ತಾ ಪರ ಆ್ಯಂಡ್ರೆ ರಸ್ಸೆಲ್ ಮತ್ತು ಪ್ರಸಿದ್ಧ ಕೃಷ್ಣ ತಲಾ 1 ವಿಕೆಟ್ ಪಡೆದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News