ಐಪಿಎಲ್ ಹಣಾಹಣಿ: ಚೆನ್ನೈ ವಿರುದ್ಧ ಹೈದರಾಬಾದ್ ಗೆಲುವಿಗೆ 168 ರನ್ ಗುರಿ

Update: 2020-10-13 15:59 GMT

ದುಬೈ: ಐಪಿಎಲ್ ಟೂರ್ನಿಯ 29ನೇ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ ಸಾಧಾರಣ ಮೊತ್ತ ಗಳಿಸಿದ್ದು, ಹೈದರಾಬಾದ್ ಗೆಲುವಿಗೆ 168 ರನ್ ಗುರಿ ನೀಡಿದೆ.

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಚೆನ್ನೈ ಸೂಪರ್ ಕಿಂಗ್ಸ್ ನಿಗದಿತ 20 ಓವರ್ ಗಳಲ್ಲಿ 167/6 ರನ್ ಗಳಿಸಿತು. ಶೇನ್ ವಾಟ್ಸನ್ 42, ಸ್ಯಾಮ್ ಕುರ್ರಮ್ 31, ಅಂಬಟಿ ರಾಯುಡು 41, ನಾಯಕ ಧೋನಿ 21 ಹಾಗೂ ರವೀಂದ್ರ ಜಡೇಜ 25 ರನ್ ಗಳಿಸಿದರು.

ಹೈದರಾಬಾದ್ ಪರ ಸಂದೀಪ್ ಶರ್ಮಾ, ನಟರಾಜನ್ ಹಾಗೂ ಖಲೀಲ್ ಅಹ್ಮದ್ ತಲಾ 2 ವಿಕೆಟ್ ಪಡೆದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News