×
Ad

ಆರೋಗ್ಯಸೇತು ಆ್ಯಪ್‌ಗೆ ವಿಶ್ವ ಆರೋಗ್ಯ ಸಂಸ್ಥೆ ಶ್ಲಾಘನೆ

Update: 2020-10-13 21:53 IST

ಹೊಸದಿಲ್ಲಿ, ಅ.13: ಕೋವಿಡ್-19 ಸಮೂಹವನ್ನು ಗುರುತಿಸಲು ಆರೋಗ್ಯ ಸಂಸ್ಥೆಗೆ ನೆರವಾಗುವ ಭಾರತದ ಆರೋಗ್ಯಸೇತು ಮೊಬೈಲ್ ಆ್ಯಪ್‌ಗೆ ವಿಶ್ವ ಆರೋಗ್ಯ ಸಂಸ್ಥೆಯ ಶ್ಲಾಘನೆ ದೊರಕಿದೆ.

ಭಾರತದ ಆರೋಗ್ಯಸೇತು ಆ್ಯಪ್ ಅನ್ನು 150 ಮಿಲಿಯನ್ ಬಳಕೆದಾರರು ಡೌನ್‌ಲೋಡ್ ಮಾಡಿಕೊಂಡಿದ್ದು ಇದು ಕೊರೋನ ಸೋಂಕು ಪರೀಕ್ಷೆಯನ್ನು ಹೆಚ್ಚಿಸಬೇಕಿರುವ ಕೋವಿಡ್-19 ಸಮೂಹವನ್ನು ಗುರುತಿಸಲು ಆರೋಗ್ಯ ಇಲಾಖೆಗೆ ನೆರವಾಗುತ್ತದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಪ್ರಧಾನ ನಿರ್ದೇಶಕ ಟೆಡ್ರಾಸ್ ಅದ ನಾಮ್ ಗೇಬ್ರಿಯೇಸಸ್ ಸುದ್ಧಿಗೋಷ್ಟಿಯಲ್ಲಿ ಹೇಳಿದ್ದಾರೆ.

ಕೇಂದ್ರ ಸರಕಾರ ಕಳೆದ ಎಪ್ರಿಲ್‌ನಲ್ಲಿ ಆರೋಗ್ಯಸೇತು ಆ್ಯಪ್‌ಗೆ ಚಾಲನೆ ನೀಡಿತ್ತು. ತಮ್ಮ ಸುತ್ತಮುತ್ತ ಕೊರೋನ ವೈರಸ್ ಸೋಂಕಿನ ಸಂಭವನೀಯ ಅಪಾಯದ ಬಗ್ಗೆ ಬಳಕೆದಾರರಿಗೆ ಮಾಹಿತಿ ನೀಡುವ ಜೊತೆಗೆ, ಸೋಂಕಿಗೆ ಸಂಬಂಧಿಸಿದ ಮಾಹಿತಿ, ಸಲಹೆ ಹಾಗೂ ಆರೋಗ್ಯವಂತರಾಗಿ ಇರಲು ಅನುಸರಿಸಬೇಕಾದ ಕ್ರಮಗಳನ್ನು ವಿವರಿಸುತ್ತದೆ. ಮುಂಬೈಯ ಧಾರಾವಿಯಲ್ಲಿ ಕೊರೋನ ಸೋಂಕು ನಿಯಂತ್ರಣಕ್ಕೆ ನಡೆಸಿದ್ದ ಪ್ರಯತ್ನವನ್ನು ಕೆಲ ತಿಂಗಳ ಹಿಂದೆ ವಿಶ್ವ ಆರೋಗ್ಯ ಸಂಸ್ಥೆಯ ಮುಖ್ಯಸ್ಥರು ಶ್ಲಾಘಿಸಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News