×
Ad

ಈಡಿ ಪ್ರಕರಣದಲ್ಲಿ ಸ್ವಪ್ನಾ ಸುರೇಶ್ ಗೆ ಜಾಮೀನು, ಆದರೆ ಬಿಡುಗಡೆಯಿಲ್ಲ

Update: 2020-10-13 23:09 IST

ಕೊಚ್ಚಿ,ಅ.13: ಕೇರಳದ ಚಿನ್ನ ಕಳ್ಳಸಾಗಾಣಿಕೆ ಪ್ರಕರಣದ ಪ್ರಮುಖ ಆರೋಪಿ ಸ್ವಪ್ನಾ ಸುರೇಶ್ ಗೆ ಜಾರಿ ನಿರ್ದೇಶನಾಲಯ (ಈ.ಡಿ.)ವು ದಾಖಲಿಸಿದ್ದ ಪ್ರಕರಣದಲ್ಲಿ ಇಲ್ಲಿಯ ನ್ಯಾಯಾಲಯವು ಮಂಗಳವಾರ ಜಾಮೀನು ಮಂಜೂರು ಮಾಡಿದೆ. ಆದರೆ ಪ್ರಕರಣದಲ್ಲಿ ಭಯೋತ್ಪಾದಕರೊಂದಿಗೆ ನಂಟಿನ ಕುರಿತು ಎನ್‌ಐಎ ನಡೆಸುತ್ತಿರುವ ತನಿಖೆಯಲ್ಲಿ ಆರೋಪಿಯಾಗಿರುವುದರಿಂದ ಆಕೆಯ ಜೈಲುವಾಸ ಮುಂದುವರಿಯಲಿದೆ.

ಕಳೆದ ವಾರ ಆರ್ಥಿಕ ಅಪರಾಧಗಳ ನ್ಯಾಯಾಲಯವು ಕಸ್ಟಮ್ಸ್ ಇಲಾಖೆಯು ದಾಖಲಿಸಿದ್ದ ಪ್ರಕರಣದಲ್ಲಿ ಸ್ವಪ್ನಾ ಸುರೇಶಗೆ ಜಾಮೀನು ನೀಡಿತ್ತು. ಜುಲೈ 5ರಂದು ಯುಎಇಯಿಂದ ಆಗಮಿಸಿದ್ದ ವಿಮಾನದಲ್ಲಿ ರಾಜತಾಂತ್ರಿಕ ಲಗೇಜ್‌ನಲ್ಲಿ ಬಚ್ಚಿಟ್ಟಿದ್ದ 14.82 ಕೋ.ರೂ. ಮೌಲ್ಯದ ಚಿನ್ನವನ್ನು ಕೊಚ್ಚಿಯ ಕಸ್ಟಮ್ಸ್ ಅಧಿಕಾರಿಗಳು ಪತ್ತೆ ಮಾಡುವುದರೊಂದಿಗೆ ಕಳ್ಳ ಸಾಗಾಣಿಕೆ ಪ್ರಕರಣ ಬೆಳಕಿಗೆ ಬಂದಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News