ಮದ್ದಡ್ಕ ಹೆಲ್ಪ್ ಲೈನ್ ನಿಂದ ಮದ್ದಡ್ಕದಲ್ಲಿ ರಕ್ತದಾನ ಶಿಬಿರ

Update: 2020-10-14 05:17 GMT

ಬೆಳ್ತಂಗಡಿ, ಅ.14: ಮದ್ದಡ್ಕ ಹೆಲ್ಪ್ ಲೈನ್ ವತಿಯಿಂದ  ಮದ್ದಡ್ಕದಲ್ಲಿ ರಕ್ತದಾನ ಶಿಬಿರ ನಡೆಯಿತು

ಶಿಬಿರವನ್ನು ಮದ್ದಡ್ಕ ನೂರುಲ್ ಹುದಾ ಜುಮಾ ಮಸೀದಿ ಖತೀಬ್ ಮುಹಮ್ಮದ್ ರಫೀಕ್ ಅಹ್ಸನಿ ದುಆ ಮೂಲಕ ಉದ್ಘಾಟಿಸಿದರು. ಸಭಾಕಾರ್ಯಕ್ರಮದ ಅಧ್ಯಕ್ಷತೆಯನ್ನು ಝಹೀರ್ ಸಬರಬೈಲ್ ವಹಿಸಿದ್ದರು.

ಮುಖ್ಯ ಅತಿಥಿಗಳಾಗಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯ ಜಿಲ್ಲಾ ಸಮಿತಿ ಸದಸ್ಯ ಹೈದರ್ ನೀರ್ಸಾಲ್, ಆಸಿಫ್ ದಾರಿಮಿ, ಬ್ಲಡ್ ಡೋನರ್ಸ್ ಮಂಗಳೂರು ಇದರ ಅಧ್ಯಕ್ಷ ಸಿದ್ದೀಖ್ ಮಂಜೇಶ್ವರ, ಉಪಾಧ್ಯಕ್ಷ ದಾವೂದ್ ಬಜಾಲ್, ಮದ್ದಡ್ಕ ನೂರುಲ್ ಹುದಾ ಜುಮಾ ಮಸೀದಿಯ ಅಧ್ಯಕ್ಷ ಅಬ್ಬೋ ನ್ ಮದ್ದಡ್ಕ, ರೆಡ್ ಕ್ರಾಸ್ ಸಂಸ್ಥೆಯ ಮುಖಂಡ ಪ್ರವೀಣ್ ಕುಮಾರ್ ಮುಖ್ಯ ಅತಿಥಿಗಳಾಗಿ ಶಿಬಿರದಲ್ಲಿ ಭಾಗವಹಿಸಿದರು.

ಕಾರ್ಯಕ್ರಮದಲ್ಲಿ ಸುಮಾರು 73 ರಕ್ತದಾನಿಗಳು ರಕ್ತದಾನ ಮಾಡಿದರು,

ಅಲ್ತಾಫ್ ಮದ್ದಡ್ಕ ಕಾರ್ಯಕ್ರಮ ನಿರೂಪಿಸಿದರು. ಅಸ್ಲಂ ಮದ್ದಡ್ಕ ಸ್ವಾಗತಿಸಿದರು. ಶಾಸ್ ಮದ್ದಡ್ಕ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News