ಪದ್ಮಶ್ರೀ ಪುರಸ್ಕೃತ ಕೂಚಿಪುಡಿ ಕಲಾವಿದೆ ಶೋಭಾ ನಾಯ್ಡು ಇನ್ನಿಲ್ಲ

Update: 2020-10-14 17:42 GMT

ಹೈದರಾಬಾದ್, ಅ.14: ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಖ್ಯಾತ ಕೂಚಿಪುಡಿ ನೃತ್ಯ ಕಲಾವಿದೆ ಶೋಭಾ ನಾಯ್ಡು ಮಂಗಳವಾರ ನಿಧನರಾಗಿದ್ದಾರೆ.

60 ವರ್ಷ ವಯಸ್ಸಿನ ಶೋಭಾ ನಾಯ್ಡು ಅವರು ಅನಾರೋಗ್ಯದ ಹಿನ್ನೆಲೆಯಲ್ಲಿ ಸ್ಥಳೀಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಇಂದು ಮುಂಜಾನೆ 1 ಗಂಟೆಯ ವೇಳೆಗೆ ಅವರು ಕೊನೆಯುಸಿರೆಳೆದರೆಂದು, ನಿಕಟವರ್ತಿ ಮೂಲಗಳು ತಿಳಿಸಿವೆ.

ವಿಪ್ರ ನಾರಾಯಣ, ಕಲ್ಯಾಣ ಶ್ರೀನಿವಾಸಂ ಮತ್ತಿತರ ಪ್ರಸಿದ್ಧ ನೃತ್ಯರೂಪಕಗಳಿಗೆ ನಿರ್ದೇಶನ ಹಾಗೂ ನೃತ್ಯವನ್ನು ಮಾಡಿದ್ದರು. ನೃತ್ಯರೂಪಕಗಳಲ್ಲಿ ಅವರ ಸತ್ಯಭಾಮ, ದೇವದೇವಕಿ, ಪದ್ಮಾವತಿ, ಸಾಯಿಬಾಬಾ ಹಾಗೂ ಪಾರ್ವತಿ ದೇವಿ ಪಾತ್ರಗಳು ಭಾರೀ ಜನಮನ್ನಣೆ ಗಳಿಸಿದ್ದವು.

ಕೂಚಿಪುಡಿ ನೃತ್ಯ ಶಿಕ್ಷಕಿಯಾಗಿ ಅವರು ಭಾರತ ಹಾಗೂ ವಿದೇಶಗಳಲ್ಲಿ ಹಲವಾರು ವಿದ್ಯಾರ್ಥಿಗಳಿಗೆ ತರಬೇತು ನೀಡಿದ್ದಾರೆ.ಬ್ರಿಟನ್, ಅಮೆರಿಕ ಸೇರಿದಂತೆ ವಿವಿಧ ದೇಶಗಳಲ್ಲಿ ಅವರು ಅನೇಕ ಕಡೆ ನೃತ್ಯಪ್ರದರ್ಶನಗಳನ್ನು ನೀಡಿದ್ದಾರೆ.

ತನ್ನ ಕಲಾ ಸಾಧನೆಗಾಗಿ ಶೋಭಾ ನಾಯ್ಡು ಅವರು ಪದ್ಮಶ್ರೀ ಪುರಸ್ಕಾರದ ಜೊತೆಗೆ ಆಂಧ್ರಪ್ರದೇಶ ಪ್ರಶಸ್ತಿ ಹಾಗೂ ಹಲವಾರು ಪ್ರತಿಷ್ಠಿತ ಸಂಘ,ಸಂಸ್ಥೆಗಳ ಪ್ರಶಸ್ತಿಗಳನ್ನು ಪಡೆದುಕೊಂಡಿದ್ದರು.

ಶೋಭಾ ನಾಯ್ಡು ಅವರ ನಿಧನಕ್ಕೆ ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ ರಾವ್ ಗಾಢ ಸಂತಾಪ ವ್ಯಕ್ತಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News