ಮೆಹಬೂಬಾ ಮುಫ್ತಿ ಅವರನ್ನು ಭೇಟಿಯಾದ ಎನ್‌ಸಿಯ ಫಾರೂಕ್ ಅಬ್ದುಲ್ಲಾ, ಉಮರ್ ಅಬ್ದುಲ್ಲಾ

Update: 2020-10-14 18:03 GMT

 ಶ್ರೀನಗರ, ಅ. 14: ನ್ಯಾಶನಲ್ ಕಾನ್ಫರೆನ್ಸ್ (ಎನ್‌ಸಿ) ಅಧ್ಯಕ್ಷ ಫಾರೂಕ್ ಅಬ್ದುಲ್ಲಾ ಹಾಗೂ ಉಪಾಧ್ಯಕ್ಷ ಉಮರ್ ಅಬ್ದುಲ್ಲಾ ಅವರು ಹದಿನಾಲ್ಕು ತಿಂಗಳ ಬಂಧನದ ಬಳಿಕ ಮಂಗಳವಾರ ಬಿಡುಗಡೆಯಾಗಿರುವ ಪಿಡಿಪಿ ಅಧ್ಯಕ್ಷೆ ಮೆಹಬೂಬಾ ಮುಫ್ತಿ ಅವರನ್ನು ಅವರ ನಿವಾಸದಲ್ಲಿ ಬುಧವಾರ ಭೇಟಿಯಾಗಿದ್ದಾರೆ.

 ‘‘ನನ್ನ ನಿವಾಸಕ್ಕೆ ಫಾರೂಕ್ ಸರ್ ಹಾಗೂ ಉಮರ್ ಸರ್ ಅವರು ಭೇಟಿ ನೀಡಿರುವುದು ಒಳ್ಳೆಯ ವಿಚಾರ. ಅವರ ಮಾತುಗಳನ್ನು ಕೇಳಿ ನನ್ನಲ್ಲಿ ಧೈರ್ಯ ಮೂಡಿದೆ. ನಾವೆಲ್ಲ ಸಂಘಟಿತರಾಗಿ ಉತ್ತಮಿಕೆಗೆ ಬದಲಾವಣೆ ತರಬಹುದು ಎಂಬ ಖಾತರಿ ನನಗಿದೆ’’ ಎಂದು ಮೆಹಬೂಬಾ ಮುಫ್ತಿ ಹೇಳಿದ್ದಾರೆ.

ಈ ನಡುವೆ ಕಳೆದ ವರ್ಷ ಕೇಂದ್ರ ಸರಕಾರ ಜಮ್ಮು ಹಾಗೂ ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ಹಿಂದೆ ತೆಗೆದಿರುವುದಕ್ಕೆ ಸಂಬಂಧಿಸಿದ ‘ಗುಪ್ಕರ್ ಘೋಷಣೆ’ ಕುರಿತು ಮುಂದಿನ ಕ್ರಮಗಳನ್ನು ಘೋಷಿಸಲು ನ್ಯಾಶನಲ್ ಕಾನ್ಫರೆನ್ಸ್‌ನ ಫಾರೂಕ್ ಅಬ್ದುಲ್ಲಾ ತನ್ನ ನಿವಾಸದಲ್ಲಿ ಅಕ್ಟೋಬರ್ 15ರಂದು ಸಭೆ ಕರೆದಿದ್ದಾರೆ. ಅಲ್ಲದೆ, ಸಭೆಯಲ್ಲಿ ಪಾಲ್ಗೊಳ್ಳುವಂತೆ ಮೆಹಬೂಬಾ ಮುಫ್ತಿ ಅವರಿಗೆ ಆಹ್ವಾನ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News