ಸಿನೆಮಾ ಮಂದಿರ ಪುನರಾರಂಭ: ದಿಲ್ಲಿಯಲ್ಲಿ ಬೆರಳೆಣಿಕೆಯ ಟಿಕೆಟ್ ಮಾರಾಟ

Update: 2020-10-15 15:19 GMT

ಹೊಸದಿಲ್ಲಿ: ಕಳೆದ 7 ತಿಂಗಳುಗಳಿಂದ ಬಾಗಿಲು ಮುಚ್ಚಿದ್ದ ಚಿತ್ರಮಂದಿರಗಳು ಕೋವಿಡ್ -19 ಶಿಷ್ಟಾಚಾರ ದೊಂದಿಗೆ ದೇಶದ ಕೆಲವು ರಾಜ್ಯಗಳಲ್ಲಿ ಇಂದು  ಮತ್ತೆ ತೆರೆದಿದ್ದು, ಮೊದಲ ದಿನ ಕೆಲವೇ ಸಿನೆಮಾ ಟಿಕೆಟ್ ಗಳು ಮಾರಾಟವಾಗಿ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಹೊಸ ಚಿತ್ರಗಳು ಬಿಡುಗಡೆಯಾಗದೇ ಇದ್ದರೂ ವಾರಾಂತ್ಯದಲ್ಲಿ ಪ್ರೇಕ್ಷಕರ ಸಂಖ್ಯೆ ಹೆಚ್ಚಬಹುದು. ಈಗ ಹಳೆ ಚಿತ್ರ್ರ ಪ್ರದರ್ಶಿಸಲಾಗುತ್ತಿದೆ ಎಂದು ಥಿಯೇಟರ್ ನ ಅಧಿಕಾರಿಗಳು ತಿಳಿಸಿದ್ದಾರೆ.

ದಿಲ್ಲಿಯ ಗ್ರೇಟರ್ ಕೈಲಾಶ್ ಪ್ರದೇಶದಲ್ಲಿರುವ ಸಿನೆಮಾ ಮಂದಿರದಲ್ಲಿ ಇಂದು ಬೆಳಗ್ಗಿನ 11:30ರ ಪ್ರದರ್ಶನಕ್ಕೆ 4 ಮಂದಿ, ಅಪರಾಹ್ನ 2:30ರ ಪ್ರದರ್ಶನಕ್ಕೆ ಐದು ಮಂದಿ ಪ್ರೇಕಕರು ಟಿಕೆಟ್ ಗಳನ್ನು ಖರೀದಿಸಿದ್ದರು. ಈ ಸಿನೆಮಾ ಗೃಹ 150 ಸೀಟುಗಳ ಸಾಮರ್ಥ್ಯ ಹೊಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News