ಮುಂಬೈ: ಕಟ್ಟಡದ ಅಂಚಿನಲ್ಲಿ ಸಾಹಸ ಪ್ರದರ್ಶಿಸಿದ ವ್ಯಕ್ತಿಗೆ ನೋಟಿಸ್

Update: 2020-10-15 17:02 GMT

ಮುಂಬೈ, ಅ. 15: ಮುಂಬೈಯ ಕಾಂದಿವಲಿ ಪಶ್ಚಿಮ ಉಪನಗರದಲ್ಲಿ ಅತಿ ಎತ್ತರದ ಕಟ್ಟಡದ ಅಂಚಿನಲ್ಲಿ ಸಾಹಸ ಪ್ರದರ್ಶಿಸಿದ ವ್ಯಕ್ತಿಯ ವಿರುದ್ಧ ಮುಂಬೈ ಪೊಲೀಸರು ಪ್ರಕರಣ ದಾಖಲಿಸಿ, ನೋಟಿಸು ಜಾರಿ ಮಾಡಿದ್ದಾರೆ. ಭಾರತ್ ಎಸ್‌ಆರ್‌ಎ ಕಟ್ಟಡದ ಕೊನೆಯ 23ನೇ ಮಹಡಿಯ ಅಂಚಿನಲ್ಲಿ ವ್ಯಕ್ತಿಯೋರ್ವ ಪ್ರದರ್ಶಿಸಿದ ಅತಿ ಅಪಾಯಕಾರಿ ಸಾಹಸ ಪ್ರದರ್ಶನ ಸಾಮಾಜಿಕ ಜಾಲ ತಾಣದಲ್ಲಿ ವೈರಲ್ ಆಗಿತ್ತು. ಇದು ಸ್ಥಳೀಯ ಪೊಲೀಸರ ಅರಿವಿಗೆ ಬಂದಿತ್ತು ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

ಓರ್ವ ವ್ಯಕ್ತಿ ಸಾಹಸ ಪ್ರದರ್ಶಿಸುತ್ತಿರುವುದು. ಇನ್ನಿಬ್ಬರು ವ್ಯಕ್ತಿಗಳು ವೀಡಿಯೊ ಶೂಟ್ ಮಾಡುವ ವೀಡಿಯೊವನ್ನು ಇನ್‌ಸ್ಟಾಗ್ರಾಂಗೆ ಅಪ್‌ಲೋಡ್ ಮಾಡಲಾಗಿತ್ತು ಎಂದು ಅವರು ತಿಳಿಸಿದ್ದಾರೆ. ಈ ವೀಡಿಯೊ ಸಾಮಾಜಿಕ ಜಾಲ ತಾಣದಲ್ಲಿ ವ್ಯಾಪಕ ಹಬ್ಬಿತ್ತು. ಯುವಕನೋರ್ವ ಶಕ್ತಿ ವರ್ಧಕ ಪೇಯ ಸೇವಿಸುತ್ತಿರುವುದು, ಕಟ್ಟಡದ 23ನೇ ಮಹಡಿಯ ಅಂಚಿನಲ್ಲಿ ಕುಳಿತಿರುವುದು. ಅನಂತರ ಎರಡು ಅಡಿ ಅಂತರದ ಇನ್ನೊಂದು ಅಂಚಿಗೆ ಹಾರಿ ಕೈಯಲ್ಲಿ ನಡೆದು ಸಾಹಸ ಪ್ರದರ್ಶಿಸುತ್ತಿರುವುದು ವೀಡಿಯೊದಲ್ಲಿ ದಾಖಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News