ಎಫ್‌ಎಒನ 75 ವರ್ಷಾಚರಣೆಯ ನೆನಪಿಗೆ ಪ್ರಧಾನಿಯಂದ 75 ರೂ. ನಾಣ್ಯ ಬಿಡುಗಡೆ

Update: 2020-10-16 17:58 GMT

ಹೊಸದಿಲ್ಲಿ, ಅ. 16: ವಿಶ್ವಸಂಸ್ಥೆಯ ಆಹಾರ ಮತ್ತು ಕೃಷಿ ಸಂಘಟನೆ (ಎಫ್‌ಎಒ)ಯ 75ನೇ ವರ್ಷಾಚರಣೆಯ ನೆನಪಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರ 75 ರೂಪಾಯಿ ನಾಣ್ಯ ಬಿಡುಗಡೆಗೊಳಿಸಿದರು.

ವೆಬ್‌ಟೆಲಿಕಾಸ್ಟ್ ಮೂಲಕ ಮಾತನಾಡಿದ ಪ್ರಧಾನಿ, 17 ನೂತನ ಜೈವಿಕ ಬಲವರ್ಧಿತ ಬೆಳೆ ಪ್ರಬೇಧಗಳನ್ನು ಬಿಡುಗಡೆಗೊಳಿಸಿದರು ಹಾಗೂ ಕೃಷ್ಯುತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ ನೀಡುವ ಸರಕಾರದ ಬದ್ಧತೆಯನ್ನು ಮರು ಉಚ್ಚರಿಸಿದರು.

ಇತ್ತೀಚೆಗೆ ಕೇಂದ್ರದೊಂದಿಗೆ ಮಾತುಕತೆ ನಡೆಸಿದ ಹೊರತಾಗಿಯೂ ವಿವಾದಾತ್ಮಕ ಕೃಷಿ ಕಾಯ್ದೆ ವಿರುದ್ಧ ನಡೆಯುತ್ತಿರುವ ತಮ್ಮ ಪ್ರತಿಭಟನೆ ಹಿಂದೆ ತೆಗೆಯಲು ಹಲವು ರೈತರು ನಿರಾಕರಿಸುತ್ತಿರುವ ಸಂದರ್ಭ ಈ ಬೆಳವಣಿಗೆ ನಡೆದಿದೆ.

‘‘ಕನಿಷ್ಠ ಬೆಂಬಲ ಬೆಲೆ ಹಾಗೂ ಸರಕಾರದ ಸಂಗ್ರಹಣೆ ದೇಶದ ಆಹಾರ ಭಧ್ರತೆಯ ಎರಡು ಪ್ರಮುಖ ಅಂಗ. ಉತ್ತಮ ಸೌಲಭ್ಯ ಹಾಗೂ ವೈಜ್ಞಾನಿಕ ದಾರಿಯಲ್ಲಿ ಇದು ನಿರಂತರ ಕಾರ್ಯ ನಿರ್ವಹಿಸುವುದು ಮುಖ್ಯ’’ ಎಂದು ಪ್ರಧಾನಿ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News