ಆರೋಗ್ಯವಂತ ಯವಜನರು ಲಸಿಕೆ ಪಡೆಯಲು 2022ರವರೆಗೆ ಕಾಯಬೇಕು: ವಿಶ್ವ ಆರೋಗ್ಯ ಸಂಸ್ಥೆ ವಿಜ್ಞಾನಿ

Update: 2020-10-16 18:31 GMT

ಜಿನೀವ (ಸ್ವಿಟ್ಸರ್‌ಲ್ಯಾಂಡ್), ಅ. 16: ಯುವ ಮತ್ತು ಆರೋಗ್ಯವಂತ ವ್ಯಕ್ತಿಗಳು ತಮ್ಮ ಕೊರೋನ ವೈರಸ್ ಲಸಿಕೆಯನ್ನು ಪಡೆಯಲು 2022ರವರೆಗೆ ಕಾಯಬೇಕಾಗುತ್ತದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಮುಖ್ಯ ವಿಜ್ಞಾನಿ ಸೌಮ್ಯ ಸ್ವಾಮಿನಾಥನ್ ಹೇಳಿದ್ದಾರೆ.

‘‘ಮುಂದಿನ ವರ್ಷದ ಜನವರಿ ಮೊದಲ ದಿನಾಂಕದಂದು ಅಥವಾ ಎಪ್ರಿಲ್ ಮೊದಲ ದಿನಾಂಕದಂದು ನನಗೆ ಕೊರೋನ ವೈರಸ್ ಲಸಿಕೆ ಸಿಗುತ್ತದೆ ಹಾಗೂ ಬಳಿಕ ಎಲ್ಲವೂ ಸಾಮಾನ್ಯ ಸ್ಥಿತಿಗೆ ಬರುತ್ತದೆ ಎಂದು ಜನರು ಭಾವಿಸಿದ್ದಾರೆ. ಆದರೆ, ಹಾಗೆ ಆಗುವುದಿಲ್ಲ’’ ಎಂದು ಬುಧವಾರ ನಡೆದ ವಿಶ್ವ ಆರೋಗ್ಯ ಸಂಸ್ಥೆಯ ಆನ್‌ಲೈನ್ ಪ್ರಶ್ನೋತ್ತರ ಕಾರ್ಯಕ್ರಮದಲ್ಲಿ ಮಾತನಾಡಿದ ಸೌಮ್ಯ ಹೇಳಿದರು.

‘‘ಈ ವಿಷಯದಲ್ಲಿ ತುಂಬಾ ಸೂಚನೆಗಳು ಹೊರಬರಲಿವೆ. ಆದರೆ, ನನ್ನ ಪ್ರಕಾರ, ಓರ್ವ ಯುವ ಹಾಗೂ ಆರೋಗ್ಯವಂತ ವ್ಯಕ್ತಿಯೋರ್ವ ಲಸಿಕೆ ಪಡೆಯಲು 2022ರವರೆಗೆ ಕಾಯಬೇಕಾಗುತ್ತದೆ’’ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News