ಕೊರೋನ ರೋಗಿಗಳ ಮೇಲೆ ರೆಮ್‌ಡೆಸಿವಿರ್ ಪರಿಣಾಮ ಶೂನ್ಯ: ವಿಶ್ವ ಆರೋಗ್ಯ ಸಂಸ್ಥೆ

Update: 2020-10-16 18:41 GMT

ಜಿನೀವ (ಸ್ವಿಟ್ಸರ್‌ಲ್ಯಾಂಡ್), ಅ. 16: ಕೋವಿಡ್-19 ರೋಗಿಗಳ ಆಸ್ಪತ್ರೆವಾಸದ ಅವಧಿ ಅಥವಾ ಬದುಕುಳಿಯುವ ಸಾಧ್ಯತೆ ಮೇಲೆ ಗಿಲಿಯಡ್ ಸಯನ್ಸಸ್ ಇಂಕ್ ಕಂಪೆನಿ ತಯಾರಿಸುತ್ತಿರುವ ‘ರೆಮ್‌ಡೆಸಿವಿರ್’ ಔಷಧ ಪರಿಣಾಮ ಶೂನ್ಯ ಎನ್ನುವುದು ವಿಶ್ವ ಆರೋಗ್ಯ ಸಂಸ್ಥೆ ನಡೆಸಿರುವ ಕ್ಲಿನಿಕಲ್ ಪರೀಕ್ಷೆಯಲ್ಲಿ ಸಾಬೀತಾಗಿದೆ.

 ವಿಶ್ವ ಆರೋಗ್ಯ ಸಂಸ್ಥೆಯ ಪರೀಕ್ಷೆಯಲ್ಲಿ ಈ ಫಲಿತಾಂಶ ಕಂಡುಬಂದಿದೆ. ರೆಮ್‌ಡೆಸಿವಿರ್, ಹೈಡ್ರಾಕ್ಸಿಕ್ಲೋರೋಕ್ವಿನ್, ಎಚ್‌ಐವಿ ನಿಗ್ರಹ ಔಷಧ ಸಂಯುಕ್ತ ಲೊಪಿನವಿರ್/ರಿಟೊನವಿರ್ ಹಾಗೂ ಇಂಟರ್‌ಫೆರೊನ್ ಎಂಬ ನಾಲ್ಕು ಸಂಭಾವ್ಯ ಔಷಧಿಗಳ ಕ್ಲಿನಿಕಲ್ ಪರೀಕ್ಷೆಯನ್ನು ಸಂಸ್ಥೆ ನಡೆಸಿತ್ತು. 30ಕ್ಕಿಂತಲೂ ಹೆಚ್ಚು ದೇಶಗಳ 11,266 ವಯಸ್ಕರ ಮೇಲೆ ಈ ಪರೀಕ್ಷೆಗಳನ್ನು ನಡೆಸಲಾಗಿತ್ತು.

ಈ ಔಷಧಗಳು ರೋಗಿಗಳ ಆಸ್ಪತ್ರೆವಾಸವನ್ನೂ ಕಡಿಮೆಗೊಳಿಸಲಿಲ್ಲ, ಮರಣ ದರವನ್ನೂ ಇಳಿಸಲಿಲ್ಲ ಎನ್ನುವುದು ಪರೀಕ್ಷೆಯಲ್ಲಿ ಕಂಡುಬಂದಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಗುರುವಾರ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News