1.1 ಕೋಟಿ ಬಾಲಕಿಯರು ಮರಳಿ ಶಾಲೆಗೆ ಹೋಗುವುದಿಲ್ಲ: ಯುನೆಸ್ಕೊ ಮುಖ್ಯಸ್ಥೆ

Update: 2020-10-16 18:46 GMT

ಕಿನ್‌ಶಾಶ (ಕಾಂಗೊ), ಅ. 16: ಜಗತ್ತಿನಾದ್ಯಂತ ಹೇರಲಾಗಿರುವ ಕೊರೋನ ವೈರಸ್ ಸಂಬಂಧಿ ನಿರ್ಬಂಧಗಳನ್ನು ತೆರವುಗೊಳಿಸಿದ ಬಳಿಕವೂ, ಸುಮಾರು 1.1 ಕೋಟಿ ಬಾಲಕಿಯರು ಶಾಲೆಗೆ ಮರಳುವ ಸಾಧ್ಯತೆಯಿಲ್ಲ ಎಂದು ವಿಶ್ವಸಂಸ್ಥೆಯ ಮಕ್ಕಳ ಸಂಸ್ಥೆ ಯುನೆಸ್ಕೊದ ಮುಖ್ಯಸ್ಥೆ ಆಡ್ರಿ ಅಝೌಲೆ ಗುರುವಾರ ಹೇಳಿದ್ದಾರೆ.

‘‘ಹಲವು ದೇಶಗಳಲ್ಲಿ ಶಾಲೆಗಳ ಮುಚ್ಚುಗಡೆಯಿಂದಾಗಿ ನಷ್ಟವಾಗಿದೆ’’ ಎಂದು ಡೆಮಾಕ್ರಟಿಕ್ ರಿಪಬ್ಲಿಕ್ ಆಫ್ ಕಾಂಗೊ (ಡಿಆರ್ ಕಾಂಗೊ)ದ ಶಾಲೆಯೊಂದಕ್ಕೆ ಭೇಟಿ ನೀಡಿದ ಬಳಿಕ ಅವರು ಹೇಳಿದರು.

ಕಾಂಗೊದ 2020-21ರ ಶಾಲಾ ವರ್ಷ ಆರಂಭಗೊಂಡ ಮೂರು ದಿನಗಳ ಬಳಿಕ, ರಾಜಧಾನಿ ಕಿನ್‌ಶಾಸದಲ್ಲಿರುವ ಹೈಸ್ಕೂಲೊಂದಕ್ಕೆ ಅವರು ಭೇಟಿ ನೀಡಿದರು.

‘‘ಜಗತ್ತಿನಾದ್ಯಂತ ಸುಮಾರು 1.1 ಕೋಟಿ ಬಾಲಕಿಯರು ಮರಳಿ ಶಾಲೆಗೆ ಹೋಗುವ ಪರಿಸ್ಥಿತಿಯಲ್ಲಿ ಇಲ್ಲ ಎಂದು ಅಂದಾಜಿಸಲಾಗಿದೆ’’ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News