ಅವೆುರಿಕ: 80 ಲಕ್ಷ ದಾಟಿದ ಕೊರೋನ ಸೋಂಕು ಪ್ರಕರಣ

Update: 2020-10-16 18:47 GMT

ವಾಶಿಂಗ್ಟನ್, ಅ. 16: ಅಮೆರಿಕದ ಕೊರೋನ ವೈರಸ್ ಸೋಂಕು ಪ್ರಕರಣಗಳ ಸಂಖ್ಯೆ ಗುರುವಾರ 80 ಲಕ್ಷವನ್ನು ದಾಟಿದೆ. ಈ ಸಂಖ್ಯೆಯು ಒಂದು ತಿಂಗಳಿಗೂ ಕಡಿಮೆ ಅವಧಿಯಲ್ಲಿ 10 ಲಕ್ಷದಷ್ಟು ಹೆಚ್ಚಾಗಿದೆ.

 ಅಮೆರಿಕವನ್ನು ಪ್ರವೇಶಿಸಲು ಚಳಿಗಾಲ ಸಿದ್ಧತೆ ನಡೆಸುತ್ತಿರುವಂತೆಯೇ, ದೇಶದಲ್ಲಿ ಕೊರೋನ ವೈರಸ್ ಸೋಂಕು ಪ್ರಕರಣಗಳ ಸಂಖ್ಯೆಯಲ್ಲಿ ಗಮನಾರ್ಹ ಏರಿಕೆ ಕಂಡುಬಂದಿದೆ.

ಕಳೆದ ವರ್ಷದ ಕೊನೆಯಲ್ಲಿ ಸಾಂಕ್ರಾಮಿಕ ಸ್ಫೋಟಗೊಂಡಂದಿನಿಂದ ಈವರೆಗೆ ಅಮೆರಿಕದಲ್ಲಿ 2,17,000ಕ್ಕೂ ಅಧಿಕ ಮಂದಿ ಇದಕ್ಕೆ ಬಲಿಯಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News