ಪ್ಯಾರಿಸ್ ನಲ್ಲಿ ಶಿಕ್ಷಕನ ಶಿರಚ್ಛೇದನಗೈದ ಆಗಂತುಕ

Update: 2020-10-17 08:21 GMT
ಫ್ರಾನ್ಸ್ ಅಧ್ಯಕ್ಷ ಇಮಾನ್ಯುವೆಲ್ ಮ್ಯಾಕ್ರೋನ್ (Photo: AP/PTI)

ಪ್ಯಾರಿಸ್ : ಕಳೆದ ಮೂರು ವಾರ ಅವಧಿಯಲ್ಲಿ ಎರಡನೇ ಬಾರಿ ಫ್ರಾನ್ಸ್ ನಲ್ಲಿ ನಡೆದ ಉಗ್ರ ಸಂಬಂಧಿ ಘಟನೆಯಲ್ಲಿ ಪ್ಯಾರಿಸ್ ಉಪನಗರಿಯ ರಸ್ತೆಯೊಂದರಲ್ಲಿ ಇತಿಹಾಸ ಶಿಕ್ಷಕರೊಬ್ಬರ ಶಿರಚ್ಛೇದನ ನಡೆಸಲಾಗಿದೆ. ದಾಳಿಕೋರನನ್ನು ಪೊಲೀಸರು ಗುಂಡಿಕ್ಕಿ ಸಾಯಿಸಿದ್ದಾರೆ. 

"ಇಸ್ಲಾಮಿಸ್ಟ್ ಉಗ್ರ ದಾಳಿ"ಯನ್ನು ಬಲವಾಗ ಖಂಡಿಸಿರುವ ಫ್ರಾನ್ಸ್ ಅಧ್ಯಕ್ಷ ಇಮಾನ್ಯುವೆಲ್ ಮ್ಯಾಕ್ರೋನ್, ದೇಶ ಉಗ್ರವಾದದ ವಿರುದ್ಧ ಒಗ್ಗಟ್ಟಿನಿಂದ ಹೋರಾಡಬೇಕೆಂದು ಕರೆ ನೀಡಿದ್ದಾರೆ.

ಹತ್ಯೆಗೀಡಾದ ಶಿಕ್ಷಕರು ತರಗತಿಯಲ್ಲಿ ಸುಮಾರು 10 ದಿನಗಳ ಹಿಂದೆ ಪ್ರವಾದಿ ಮುಹಮ್ಮದ್ ಅವರ ಕುರಿತಾದ ವ್ಯಂಗ್ಯಚಿತ್ರಗಳ ಬಗ್ಗೆ ಚರ್ಚಿಸಿದ್ದರೆಂದು ಅಧಿಕಾರಿಗಳು ಹೇಳಿದ್ದಾರೆ. ಇದರ ನಂತರ ಅವರಿಗೆ ಬೆದರಿಕೆಗಳು ಬಂದಿದ್ದವು. ವಿದ್ಯಾರ್ಥಿಯೊಬ್ಬನ ಹೆತ್ತವರು ಶಿಕ್ಷಕನ ವಿರುದ್ಧ ದೂರು ನೀಡಿದ್ದರೆನ್ನಲಾಗಿದೆ.

ಹತ್ಯೆ ಸಂಬಂಧಿತ ಬಂಧಿತ ವ್ಯಕ್ತಿ ಮಾಸ್ಕೋ ಮೂಲದ ವರ್ಷದ ಚೆಚೆನ್ ಯವಕನೆಂದು ಫ್ರೆಂಚ್ ಮಾಧ್ಯಮಗಳು ವರದಿ ಮಾಡಿವೆಯಾದರೂ ಈ ಸುದ್ದಿ ದೃಢಪಟ್ಟಿಲ್ಲ. ಶಂಕಿತ ದಾಳಿಕೋರನ ಬಳಿ ಚೂರಿ, ಪ್ಲಾಸ್ಟಿಕ್ ಪೆಲ್ಲೆಟ್ ಸಿಡಿಸುವ ಬಂದೂಕು ಇತ್ತು. ಆತ ಶರಣಾಗಲು ನಿರಾಕರಿಸಿದ ನಂತರ ಆತನನ್ನು ಗುಂಡಿಕ್ಕಿ ಸಾಯಿಸಲಾಗಿದೆ 

ಕನ್‍ಫ್ಲಾನ್-ಸೈಂಟ್ ಹಾನರಿನ್ ನಲ್ಲಿನ ಶಿಕ್ಷಕ ಸೇವೆ ಸಲ್ಲಿಸುತ್ತಿದ್ದ ಶಾಲೆಗೆ ಫ್ರಾನ್ಸ್ ಅಧ್ಯಕ್ಷರು ಭೇಟಿ ನೀಡಿ ಅಲ್ಲಿನ ಸಿಬ್ಬಂದಿ ಜತೆ ಮಾತನಾಡಿದ್ದಾರೆ. "ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಕಲಿಸಿದ್ದಕ್ಕಾಗಿ ನಮ್ಮ ಒಬ್ಬ ಸ್ನೇಹಿತರನ್ನು ಕೊಲೆಗೈಯ್ಯಲಾಗಿದೆ,'' ಎಂದು ನಂತರ ಮ್ಯಾಕ್ರೋನ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News