ಉಚಿತ ಕಣ್ಣಿನ ತಪಾಸಣೆ ಶಿಬಿರ, ಮಾಹಿತಿ ಕಾರ್ಯಾಗಾರ

Update: 2020-10-17 16:26 GMT

ಉಡುಪಿ, ಅ.17: ವಿಶ್ವ ಲಯನ್ಸ್ ಸೇವಾ ಸಪ್ತಾಹದ ಅಂಗವಾಗಿ ಲಯನ್ಸ್ ಕ್ಲಬ್ ಬ್ರಹ್ಮಗಿರಿ, ಲಯನ್ಸ್ ಕ್ಲಬ್ ಅಂಬಲಪಾಡಿ ಪ್ರೈಡ್ ಮತ್ತು ಪ್ರಸಾದ್ ನೇತ್ರಾಲಯಗಳ ಸಹಯೋಗದಲ್ಲಿ ಅಂಬಲಪಾಡಿ ರಾಧಾ ಡೆಂಟಲ್ / ಶೆಣೈ ಫಾರ್ಮಾ ಪರಿಸರದಲ್ಲಿ ಉಚಿತ ಕಣ್ಣಿನ ತಪಾಸಣೆ ಶಿಬಿರ ಮತ್ತು ಮಧುಮೇಹ ದಿಂದ ಕಣ್ಣಿನ ಹಾನಿ ಮಾಹಿತಿ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿತ್ತು.

ಲಯನ್ ಪ್ರಾಂತೀಯ ಅಧ್ಯಕ್ಷರಾದ ಸುನಿಲ್ ಕುಮಾರ್ ಶೆಟಿ ಹಾಗೂ ಗಣೇಶ ಸುವರ್ಣ ಅವರು ದಿನದ ಪ್ರಾಮುಖ್ಯತೆ ದ ದಿನ ಮತ್ತು ಶಿಬಿರದ ಬಗ್ಗೆ ವಿವರಿಸಿದರು. ಕಣ್ಣು ನಮ್ಮ ದೇಹದ ಅವಿಭಾಜ್ಯ ಅಂಗ ಅದನ್ನು ಉಳಿಸಲು ಪ್ರತಿಯೊಬ್ಬರು ಜಾಗರೂಕರಾಗಿರಬೇಕು ಎಂದರು.

ಎರಡೂ ಕ್ಲಬ್‌ಗಳ ಅಧ್ಯಕ್ಷ ವಾದಿರಾಜ ರಾವ್, ಜಯಾನಂದ ಕೊಡವೂರು, ಕಾರ್ಯದರ್ಶಿಗಳಾದ ಉಮೇಶ್ ನಾಯಕ್, ಪ್ರಶಾಂತ್ ಭಂಡಾರಿ, ಸುಂದರ್ ಟಿ.ಕುಂದರ್,ಸತೀಶ್ ಶೆಟ್ಟಿ, ಡಾ ಸುಧಾರಾಣಿ ಮುಂತಾದವರು ಉಪಸ್ಥಿತರಿದ್ದರು.  ಕಾರ್ಯದರ್ಶಿ ಉಮೇಶ್ ನಾಯಕ್ ಸ್ವಾಗತಿಸಿ ವಂದಿಸಿದರು. ಸುಮಾರು 50ಕ್ಕೂ ಅಧಿಕ ಮಂದಿ ಶಿಬಿರದ ಲಾಭ ಪಡೆದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News