ದೆಮ್ಮಲೆ: ಅಲ್ ಇಖ್ರಾಮ್ 2ಕೆ20 ಕಾರ್ಯಕ್ರಮ

Update: 2020-10-19 04:46 GMT

ಮಂಗಳೂರು, ಅ.19: ಸ್ಪಾಟ್ ನ್ಯೂಸ್ ಗ್ರೂಪ್ ಮಲ್ಲೂರು ಇದರ ಆಶ್ರಯದಲ್ಲಿ 'ಅಲ್-ಇಖ್ರಾಮ್ 2ಕೆ20' ಕಾರ್ಯಕ್ರಮ ರವಿವಾರ ದೆಮ್ಮಲೆಯಲ್ಲಿ ಜರುಗಿತು.

ಉದ್ಯಮಿ ಹೈದರಲಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ‌ಸೈಯದ್ ನಿಝಾಮುದ್ದೀನ್ ಬಾಫಕಿ ತಂಙಳ್ ಕೊಯಿಲಾಂಡಿ ದುಆಗೈದರು.

ಉದ್ದಬೆಟ್ಟು ಮಸೀದಿಯ ಖತೀಬ್ ಅಬ್ದುಲ್ ಖಾದರ್ ಮುನವ್ವರಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಈ ಸಂದರ್ಭದಲ್ಲಿ ಮಂಗಳೂರು ರೇಂಜ್ ಜಂಇಯತುಲ್ ಮುಅಲ್ಲಿಮೀನ್ ಅಧ್ಯಕ್ಷ ಸಲೀಂ ಅರ್ಶದಿ, ಉಪಾಧ್ಯಕ್ಷ ಕೆ.ಎಸ್.ಅಹ್ಮದ್ ದಾರಿಮಿ, ಕಾರ್ಯದರ್ಶಿ ಅಬ್ದುಲ್ ಖಾದರ್ ಯಮಾನಿ, ಮೈಮುನಾ ಫೌಂಡೇಶನ್ ಸ್ಥಾಪಕಾಧ್ಯಕ್ಷ ಮುಹಮ್ಮದ್ ಆಸಿಫ್ ಆಪತ್ಭಾಂದವ, ಉದ್ದಬೆಟ್ಟು ಮಸೀದಿಯ ಅಧ್ಯಕ್ಷ ನಿಝಾಮುದ್ದೀನ್ ಚಿಕ್ಕಮಗಳೂರು, ದೆಮ್ಮಲೆ ಮಸೀದಿಯ ಅಧ್ಯಕ್ಷ ಮುಹಮ್ಮದ್ ಶರೀಫ್, ಬದ್ರಿಯಾ ನಗರ ಮಸೀದಿಯ ಅಧ್ಯಕ್ಷ ಅಸ್ರಾರುದ್ದೀನ್ ಅವರನ್ನು ಸನ್ಮಾನಿಸಲಾಯಿತು.

ಸ್ಥಳೀಯ ಆಹ್ವಾನಿತ  ಮದ್ರಸ  ವಿದ್ಯಾರ್ಥಿಗಳಿಂದ ಮೀಲಾದುನ್ನಬಿ ಪ್ರಯುಕ್ತ ಪ್ರತಿಭೋತ್ಸವ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮದಲ್ಲಿ  ಅಶ್ರಫ್ ಸಅದಿ ಮಲ್ಲೂರು, ಹೈದರಲಿ ಮಂಗಳೂರು, ತಾಪಂ ಮಾಜಿ ಸದಸ್ಯ ಎನ್.ಇ.ಮುಹಮ್ಮದ್, ಮಲ್ಲೂರು, ನಝೀರ್ ದಾರಿಮಿ ಉದ್ದಬೆಟ್ಟು, ಗ್ರಾಪಂ ಮಾಜಿ ಅಧ್ಯಕ್ಷ ಎಂ.ಕೆ.ಯೂಸುಫ್, ಎಂ.ಡಿ.ಅಬ್ದುಲ್ ರಹಿಮಾನ್ ದೆಮ್ಮಲೆ, ಎಂ.ಮುಹಮ್ಮದ್, ಡಿ.ಮುಹಮ್ಮದ್ ಇಕ್ಬಾಲ್ ದೆಮ್ಮಲೆ, ಸಿದ್ದೀಕ್ ಬಿ.ಸಿ.ರೋಡ್, ಎಂ.ಜಿ.ಅಬ್ದುರ್ರಝಾಕ್, ಎಂ.ಐ.ಮುಹಮ್ಮದ್ ಶರೀಫ್, ಎಂ.ಕೆ.ಅಬ್ದುಲ್ ಹಕೀಂ, ಎ.ಕೆ.ಉಸ್ಮಾನ್ ಬದ್ರಿಯಾ ನಗರ, ಆಲಿಯಬ್ಬ, ಎಂ.ಎ.ಮುಹಮ್ಮದ್, ತಮೀಮುದ್ದೀನ್ ಉದ್ದಬೆಟ್ಟು, ಎಂ.ಡಿ.ಅಬ್ದುಲ್ ಕರೀಂ, ಉಮರ್ ಫಾರೂಕ್ ಮೊದಲಾದವರು ಉಪಸ್ಥಿತರಿದ್ದರು.

ಅಬ್ದುಲ್ ಜಬ್ಬಾರ್ ಮಲ್ಲೂರು ಸ್ವಾಗತಿಸಿದರು. ಮುಹಮ್ಮದ್ ಅಲ್ತಾಫ್ ದೆಮ್ಮಲೆ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News