​ಅ.21: ಮಂಗಳೂರಿನ ವಿವಿಧೆಡೆ ವಿದ್ಯುತ್ ನಿಲುಗಡೆ

Update: 2020-10-19 13:35 GMT

ಮಂಗಳೂರು, ಅ.19: ನಂದಿಗುಡ್ಡೆಯ 33/11 ಕೆ.ವಿ. ಉಪಕೇಂದ್ರದಿಂದ ಹೊರಡುವ 11 ಕೆ.ವಿ. ಮಂಗಳಾದೇವಿ ಫೀಡರ್‌ನಲ್ಲಿ ಜಂಪರ್ ಬದಲಾವಣೆ ಸಹಿತ ದುರಸ್ತಿ ಕಾಮಗಾರಿ ಹಮ್ಮಿಕೊಂಡಿದ್ದರಿಂದ ನಗರದ ವಿವಿಧೆಡೆ ಅ.21ರಂದು ಬೆಳಗ್ಗೆ 10ರಿಂದ ಸಂಜೆ 5 ಗಂಟೆವರೆಗೆ ವಿದ್ಯುತ್ ಸರಬರಾಜು ನಿಲುಗಡೆಯಾಗಲಿದೆ.

ಇದರಿಂದ ನಗರದ ಮಂಗಳಾನಗರ, ಸುಭಾಷ್‌ನಗರ, ಶಿವನಗರ, ಪಾಂಡೇಶ್ವರ, ಎಮ್ಮೆಕೆರೆ, ಹೊಗೆಬಝಾರ್, ಗೂಡ್ಸ್‌ಶೆಡ್, ಮಂಕೀಸ್ಟಾಂಡ್, ಮಂಗಳಾದೇವಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ನಿಲುಗಡೆ ಮಾಡಲಾಗುತ್ತದೆ.

ಬಿಜೈ: ಬಿಜೈನ 110/33/11 ಕೆ.ವಿ. ಉಪಕೇಂದ್ರದಿಂದ ಹೊರಡುವ 11 ಕೆ.ವಿ. ಬಿಜೈ ಫೀಡರ್‌ನಲ್ಲಿ ಅ.21ರಂದು ಬೆಳಗ್ಗೆ 10ರಿಂದ ಸಂಜೆ 5:30ರವರೆಗೆ ದುರಸ್ತಿ ಕಾಮಗಾರಿ ಹಮ್ಮಿಕೊಳ್ಳಲಾಗಿದೆ. ಇದರಿಂದ ನಗರದ ಬಿಜೈ ಮುಖ್ಯ ರಸ್ತೆ, ಬಿಜೈ ಹೊಸ ರಸ್ತೆ, ಆನೆಗುಂಡಿ, ಎಂಸಿಎಫ್ ಕಾಲೋನಿ, ಬಿಜೈ ಚರ್ಚ್ ರಸ್ತೆ, ಸಂಕೈಗುಡ್ಡ, ಗ್ಯಾಸ್ ಗೋಡೌನ್, ಬಟ್ಟಗುಡ್ಡ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ನಿಲುಗಡೆಯಾಗಲಿದೆ ಎಂದು ಮೆಸ್ಕಾಂ ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News